ವಿಜಯಪುರ: ನಗರದ ಗಾಂಧಿ ಚೌಕಿಯಲ್ಲಿ ನೂತನವಾಗಿ ಆರಂಭವಾದ ‘ಮಾಂಗಳ್ಯ’ ಶಾಪಿಂಗ್ ಮಾಲ್ ಅನ್ನು ಕನ್ನಡ ಸಿನಿಮಾ ನಟಿ ಆಶಿಕಾ ರಂಗನಾಥ್ ಸೋಮವಾರ ದೀಪ ಬೆಳಗಿಸಿ ಉದ್ಘಾಟಿಸಿದರು.
ಆಶಿಕಾ ಅವರು ಮಾಲ್‌ನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು. ನಟಿಯನ್ನು ನೋಡಲು ಬೆಳಿಗ್ಗೆಯೇ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಮಾಂಗಳ್ಯ ಶಾಪಿಂಗ್ ಮಾಲ್ ವಿಜಯಪುರದಲ್ಲಿ ಯಶಸ್ವಿಯಾಗಿ ನಡೆಯುತ್ತದೆ ಎಂಬ ವಿಶ್ವಾಸವಿದೆ ಎಂದರು.
ವಿಜಯಪುರಕ್ಕೆ ದೇಶದ ವಿವಿಧೆಡೆಯಿಂದ ಬರುವ ಪ್ರವಾಸಿಗರು, ಸ್ಥಳೀಯರು ಈ ಮಾಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಖರೀದಿಸುವ ವಿಶ್ವಾಸ ಇದೆ ಎಂದರು.
ಮಾಂಗಳ್ಯ ಶಾಪಿಂಗ್ ಮಾಲ್ ನಿರ್ದೇಶಕ ಪುಲ್ಲೂರು ನರಸಿಂಹಮೂರ್ತಿ ಮಾತನಾಡಿ, ‘2012ರಲ್ಲಿ ತೆಲಂಗಾಣದ ವಾರಂಗಲ್‌ನಲ್ಲಿ ಪ್ರಾರಂಭವಾದ ‘ಮಾಂಗಳ್ಯ’ ಶಾಪಿಂಗ್ ಮಾಲ್ ವಸ್ತ್ರ ಲೋಕದಲ್ಲಿ ಹೊಸ ಧೋರಣಿಯನ್ನು ಸೃಷ್ಟಿಸುತ್ತಾ ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ. ಆಂಧ್ರಪ್ರದೇಶದ ನಂತರ ಈಗ ಕರ್ನಾಟಕದಲ್ಲಿಯೂ ತನ್ನ ಹೆಜ್ಜೆಯನ್ನು ಮೂಡಿಸಿದೆ. ವಿಜಯಪುರ ನಗರದಲ್ಲಿ ಮಾಂಗಳ್ಯ ಮಾಲ್‌ನ 24ನೇ ಶಾಖೆ ಉದ್ಘಾಟನೆಯಾಗಿದೆ’ ಎಂದರು.
ಎಲ್ಲಾ ವರ್ಗದ ಜನರಿಗೆ, ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ತಕ್ಕಂತಹ ಗುಣಮಟ್ಟದ ವಸ್ತ್ರಗಳನ್ನು ಕಡಿಮೆ ದರದಲ್ಲಿ ನೀಡುವುದು ನಮ್ಮ ಯಶಸ್ಸಿನ ರಹಸ್ಯ ಎಂದು ಹೇಳಿದರು.
ನಮ್ಮದೇ ಆದ ಮಗ್ಗಗಳಲ್ಲಿ ನೇಯ್ದ ಬಟ್ಟೆಗಳನ್ನು, ಮಾರುಕಟ್ಟೆ ಟ್ರೆಂಡ್‌ಗಳಿಗೆ ಹೊಂದುವಂತೆ ತಯಾರಿಸುವುದರಿಂದ ಸ್ಪರ್ಧಿಗಳಿಗೆ ಮೀರಿ ನಾವು ಮುನ್ನಡೆಯುತ್ತಿದ್ದೇವೆ ಎಂದು ತಿಳಿಸಿದರು.
ಮಾಂಗಳ್ಯ ಶಾಪಿಂಗ್ ಮಾಲ್‌ನಲ್ಲಿ ಮಹಿಳೆಯರು, ಪುರುಷರು, ಯುವಕರು, ಮಕ್ಕಳು ಎಲ್ಲರಿಗೂ ತಕ್ಕಂತಹ ಆಧುನಿಕ ಫ್ಯಾಷನ್ ಸಂಗ್ರಹ, ಮದುವೆ ಮತ್ತು ಶುಭಕಾರ್ಯಗಳ ವಿಶೇಷ ವಸ್ತ್ರಗಳು ಲಭ್ಯವಿದೆ. ಇನ್ನು ಮುಂದೆ ವಿಜಯಪುರದ ಜನರು ಮದುವೆಗಳಿಗೆ ಬೇಕಾದ ಬಟ್ಟೆಗಳಿಗಾಗಿ ದೂರದೂರಿಗೆ ಹೋಗುವ ಅಗತ್ಯವಿಲ್ಲದೆ ತಮ್ಮ ಊರಲ್ಲೇ ತಕ್ಕ ಬೆಲೆಗೆ ಶಾಪಿಂಗ್ ಮಾಡುವ ಅವಕಾಶ ದೊರೆಯಲಿದೆ ಎಂದರು.
ಕಾಸಂ ನಮಶಿವಾಯ, ಕಾಸಂ ಮಲ್ಲಿಕಾರ್ಜುನ, ಕಾಸಂ ಕೇದಾರನಾಥ್, ಕಾಸಂ ಶಿವ ಪ್ರಸಾದ್, ಪುಲ್ಲೂರು ಅರುಣ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.