ADVERTISEMENT

ಸಾಮೂಹಿಕ ವಿವಾಹದಿಂದ ಬಡವರ ಸಂಕಷ್ಟ ದೂರ: ಜಗದ್ಗುರು ದಿಂಗಾಲೇಶ್ವರ ಶ್ರೀ

ಮೂವರು ಸಾಧಕರಿಗೆ ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿ ನೀಡಿ ಸನ್ಮಾನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:21 IST
Last Updated 8 ಜನವರಿ 2026, 2:21 IST
ಇಂಡಿ ತಾಲ್ಲೂಕಿನ ಗೋಳಸಾರ ಗ್ರಾಮದ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತಿ ಶಿವಯೋಗಿಗಳ 32ನೆಯ ಪುಣ್ಯ ಸ್ಮರಣೋತ್ಸವ,  ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ದಿಂಗಾಲೇಶ್ವರ ಸ್ವಾಮೀಜಿ ಉದ್ಘಾಟಿಸಿದರು
ಇಂಡಿ ತಾಲ್ಲೂಕಿನ ಗೋಳಸಾರ ಗ್ರಾಮದ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತಿ ಶಿವಯೋಗಿಗಳ 32ನೆಯ ಪುಣ್ಯ ಸ್ಮರಣೋತ್ಸವ,  ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ದಿಂಗಾಲೇಶ್ವರ ಸ್ವಾಮೀಜಿ ಉದ್ಘಾಟಿಸಿದರು   

ಇಂಡಿ: ಸಾಮೂಹಿಕ ಮದುವೆಗಳು ಅರ್ಥಿಕ ಹೊರೆ ಕಡಿಮೆ ಮಾಡುವುದರ ಜೊತೆಗೆ ಬಡ ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡುತ್ತವೆ. ನಾಡಿನ ಸಂತ, ಶರಣ ಸ್ವಾಮೀಜಿಗಳ  ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಪುಣ್ಯವಂತರು ಎಂದು ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಬುಧವಾರ ತಾಲ್ಲೂಕಿನ ಗೋಳಸಾರ ಗ್ರಾಮದ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತೀಶ್ವರ ಶಿವಯೋಗಿಗಳ 32ನೆಯ ಪುಣ್ಯ ಸ್ಮರಣೋತ್ಸವ, ಧರ್ಮಸಭೆ, ದೀಪೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

ಯರನಾಳದ ಸಂಗನಬಸವ ಶ್ರೀಗಳು ಮಾತನಾಡಿ, ‘ಗೋಳಸಾರ ಮಠ ಸದಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಕೈಗೊಂಡು ಬಡವರಿಗೆ, ದುರ್ಬಲರಿಗೆ ಸದಾ ಆಸರೆಯಾಗಿ ನಿಂತಿದೆ‘ ಎಂದರು.

ADVERTISEMENT

ಸಾಲೋಟಗಿಯ ಸಿದ್ಧೇಶ್ವರ ಆಶ್ರಮದ ಬಸವಲಿಂಗ ಶ್ರೀಗಳು ಮಾತನಾಡಿದರು. ಎ.ಪಿ.ಕಾಗವಾಡಕರ, ರವಿ ಆಳೂರ, ಆದಪ್ಪ ಪಾಸೋಡಿ, ಮಾತನಾಡಿದರು. ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿಯನ್ನು ಇತಿಹಾಸ ಸಂಶೋಧಕರಾದ ಡಾ.ನಚಿಕೇತ ದೇಸಾಯಿ, ಎ.ಎಸ್.ಪಾಸೋಡಿ, ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಸುನೀಲ ನಾರಾಯಣಕರ ಅವರಿಗೆ ನೀಡಲಾಯಿತು.

ಬಂಥನಾಳದ ವೃಷಭಲಿಂಗ ಶ್ರೀಗಳು, ಪಾನ ಮಂಗಳೂರ ಶಿವಯೋಗಿ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ರೋಡಗಿಯ ಅಭಿನವ ಶಿವಲಿಂಗ ಶ್ರೀಗಳು, ಶಿರವಾಳದ ಸೋಮಲಿಂಗ ಮಹಾರಾಜರು, ಅಗರಖೇಡದ ಅಭಿನವ ಪ್ರಭುಲಿಂಗ ಶ್ರೀಗಳು, ಹೊನವಾಡದ ಬಾಬುರಾವ ಮಹಾರಾಜರು, ಮಾಜಿ ಶಾಸಕ ರಮೇಶ ಭೂಸನೂರ, ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಪಂಚಾಯತ್‌ ರಾಜ್‌ ಇಲಾಖೆ ಹೆಚ್ಚುವರಿ ಆಯುಕ್ತ ಭೀಮಾಶಂಕರ ತೆಗ್ಗೆಳ್ಳಿ, ಭೀಮಣ್ಣ ಕವಲಗಿ, ಬಾಬು ಸಾವಕಾರ ಮೇತ್ರಿ, ಜಗದೀಶ ಕ್ಷತ್ರಿ, ಮಂಜುನಾಥ ವಂದಾಲ, ಅನಂತ ಜೈನ, ದೇವೆಂದ್ರ ಕುಂಬಾರ ಇದ್ದರು.

ಇದೇ ಸಂದರ್ಭದಲ್ಲಿ 28 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.