ಇಂಡಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಜಲದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.
ಇಂಡಿ: ಸಾಮೂಹಿಕ ವಿವಾಹ ಮಾಡಿಕೊಳ್ಳುವುದರಿಂದ ಕುಟುಂಬದ ಅರ್ಥಿಕ ಹೊರೆ ಕಡಿಮೆಯಾಗುತ್ತದೆ. ದುಂದು ವೆಚ್ಚದ ಮದುವೆಗಳಿಂದ ಆರ್ಥಿಕತೆ ಕುಸಿಯುತ್ತದೆ. ಹೀಗಾಗಿ ಯುವಕರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕರೆ ನೀಡಿದರು.
ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ಜಲದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ್ದುವರು ಮಾತನಾಡಿದರು.
ಜಲದೇಶ್ವರ ಪೂಜಾರಿಗಳಾದ ಆದಪ್ಪಚೌಡಪ್ಪ ಪೂಜಾರಿ ಮಾತನಾಡಿದರು. ಗಂಗಾಧರಗೌಡ ಪಾಟೀಲ, ಮಲಕಪ್ಪ ಸಾಹುಕಾರ ಜಂಗಲಗಿ, ವಿಠ್ಠಲ ಬಾಪುರಾಯ ಬಿರಾದಾರ ,ಗುರಪ್ಪ ಮಠಪತಿ, ಗುರಪ್ಪ ಹಕ್ಕಿ, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ದಶವಂತ, ರಮೇಶಗೌಡ ಪಾಟೀಲ, ಗಜಾನಂದ ಬಿರಾದಾರ, ಶರಣಪ್ಪ ಅಳ್ಳಗಿ, ಹಣಮಂತ ಹುನಳ್ಳಿ, ಶಾಂತಪ್ಪ ಹೂಗಾರ,ಮಹಾದೇವ ಚಾಳಿಕಾರ, ಸೋಮು ಆಳೂರ ಉಪಸ್ಥಿತರಿದ್ದರು. ಎಂಟು ನವ ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ನವ ಜೀವನಕ್ಕೆ ಕಾಲಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.