ADVERTISEMENT

ಆರ್.ಅಶೋಕ್, ವಿಜಯೇಂದ್ರಗೆ ಗ್ಯಾರಂಟಿ ಯೋಜನೆ ಬೇಕೆ: ಎಂ.ಬಿ ಪಾಟೀಲ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:30 IST
Last Updated 3 ಮಾರ್ಚ್ 2026, 2:30 IST
<div class="paragraphs"><p>ಎಂ.ಬಿ. ಪಾಟೀಲ</p></div>

ಎಂ.ಬಿ. ಪಾಟೀಲ

   

ವಿಜಯಪುರ: ‘ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಬಿಡಬೇಕು. ನನಗೆ, ಆರ್. ಅಶೋಕ ಮತ್ತು ವಿಜಯೇಂದ್ರಗೆ ಈ  ಯೋಜನೆಗಳು ಬೇಕೆ? ಶ್ರೀಮಂತರು ಸ್ವಯಂ ಪ್ರೇರಿತವಾಗಿ ಈ ಯೋಜನೆಗಳನ್ನು ಬಿಡಬೇಕು’ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.

‘ಬಿಪಿಎಲ್ ಇದ್ದವರಿಗೆ ಈ ಯೋಜನೆಗಳು ಜಾರಿಯಲ್ಲಿರಲಿ. ಶ್ರೀಮಂತರಿಗೆ ಈ ಯೋಜನೆ ಬೇಡ, ಉಳ್ಳವರು ಶಿವಾಲಯ ಕಟ್ಟುತ್ತಾರೆ ಎಂದು ಬಸವಣ್ಣ ಹೇಳಿದ್ದಾರೆ, ಹೀಗಾಗಿ ಉಳ್ಳವರು ಸ್ವಯಂ ಪ್ರೇರಿತವಾಗಿಯೇ ಈ ಯೋಜನೆಯನ್ನು ಕೈ ಬಿಡಬೇಕು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.