ADVERTISEMENT

ಸಮ್ಮೇಳನದಲ್ಲಿ ಪುಸ್ತಕ ಖರೀದಿಸಿದ ಸಚಿವ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:55 IST
Last Updated 30 ಜುಲೈ 2023, 14:55 IST
ವಿಜಯಪುರದಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಪುಸ್ತಕ ಖರೀದಿಸಿದರು. ಸಾಹಿತಿ ಪ್ರೊ.ಎಚ್‌.ಟಿ.ಪೋತೆ, ಶಂಕರ ಬೈಚಬಾಳ ಇದ್ದಾರೆ
ವಿಜಯಪುರದಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಪುಸ್ತಕ ಖರೀದಿಸಿದರು. ಸಾಹಿತಿ ಪ್ರೊ.ಎಚ್‌.ಟಿ.ಪೋತೆ, ಶಂಕರ ಬೈಚಬಾಳ ಇದ್ದಾರೆ   

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಪುಸ್ತಕ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ, ಪುಸ್ತಕಗಳನ್ನು ಖರೀದಿಸಿದರು.

ಪುಸ್ತಕ ಪ್ರಕಾಶನ ಸಂಸ್ಥೆಗಳ ಆರ್ಥಿಕ ವ್ಯವಸ್ಥೆಯು ಸುಧಾರಿಸಲು ತಮ್ಮ ಸ್ವಂತ ಹಣದಿಂದ ಸಮ್ಮೇಳನದಲ್ಲಿಯ ಎಲ್ಲ ಪುಸ್ತಕ ಮಳಿಗೆಗಳ ಎಲ್ಲ ಒಂದೊಂದು ಪುಸ್ತಕ ಖರೀದಿಸಿದರು.

‘ಬೆರಗು’ ಪ್ರಕಾಶನದ ಸಾಮಾಜಿಕ ಹೊಣೆಗಾರಿಕೆಯನ್ನು ಸಚಿವರು ಪ್ರಶಂಸೆ ಮಾಡಿದರು. ಬೆರಗು ಪ್ರಕಾಶನ ಒಂದರಲ್ಲಿಯೇ ₹ 10 ಸಾವಿರಕ್ಕೂ ಹೆಚ್ಚು ಬೆಲೆಯ ಕೃತಿಗಳನ್ನು ತಮ್ಮ ಫ.ಗು. ಹಳಕಟ್ಟಿ ಪ್ರತಿಷ್ಠಾನಕ್ಕೆ ಖರೀದಿಸಿ ಪುಸ್ತಕ ಪ್ರೀತಿಯನ್ನು ತೊರಿಸಿದರು.

ADVERTISEMENT

ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್.ಟಿ. ಪೋತೆ, ಸಾಹಿತಿ ಶಂಕರ ಬೈಚಬಾಳ, ಮಾಜಿ ಶಾಸಕ ರಾಜು ಅಲಗೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.