ADVERTISEMENT

ಶಿಕ್ಷಣದ ಜೊತೆ ನೈತಿಕ ಮೌಲ್ಯ ಕಲಿಕೆ ಅವಶ್ಯಕ: ಅಭಿನವ ಸಂಗನಬಸವ ಶಿವಾಚಾರ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:24 IST
Last Updated 12 ಫೆಬ್ರುವರಿ 2026, 6:24 IST
ತಾಲ್ಲೂಕಿನ ರೋಣಿಹಾಳ ಗ್ರಾಮದ ಸಂಗನಬಸವ ವಿದ್ಯಾವರ್ಧಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು
ತಾಲ್ಲೂಕಿನ ರೋಣಿಹಾಳ ಗ್ರಾಮದ ಸಂಗನಬಸವ ವಿದ್ಯಾವರ್ಧಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು   

ಕೊಲ್ಹಾರ: ‘ಪ್ರಸ್ತುತ ಕಲಿಕೆಯ ಜೊತೆಗೆ ಮಕ್ಕಳಿಗೆ ನೈತಿಕ ಮೌಲ್ ಅಳವಡಿಸಿಕೊಳ್ಳುವ ಶಿಕ್ಷಣ ನೀಡುವುದು ಅವಶ್ಯಕ’ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ರೋಣಿಹಾಳ ಗ್ರಾಮದ ಸಂಗನಬಸವ ವಿದ್ಯಾವರ್ಧಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ, ಸಂಗನಬಸವ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಶೈಕ್ಷಣಿಕ ರಂಗದ ಪ್ರತಿ ಹಂತದಲ್ಲೂ ಪಾಶ್ಚಾತ್ಯೀಕರಣ ಹಾಸುಹೊಕ್ಕಾಗಿದೆ. ಇದರ ನಡುವೆಯೇ ದೇಸಿ ಸಂಸ್ಕೃತಿ, ಆಚಾರ, ವಿಚಾರದ ತಿರುಳು ತಿಳಿಸುವ ಕಾರ್ಯ ನಡೆಯಬೇಕಿದೆ’ ಎಂದರು.

ADVERTISEMENT

ಸಂಗನಬಸವ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರೇಶ್ ಮನಗೂಳಿ, ‘ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ಆಹಾರ ಪದ್ಧತಿಯು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ದೇಸಿ ಹಾಗೂ ಸಾವಯವ ಆಹಾರವನ್ನು ದೈನಂದಿನ ಪದ್ಧತಿಯಲ್ಲಿ ಅಳವಡಿಸಬೇಕು. ಇದು ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ’ ಎಂದರು.

ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ, ‘ಕಲಿಕೆಯ ಕೊನೆಯ ಘಟ್ಟದಲ್ಲಿ ಜರುಗುವ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಮಕ್ಕಳ ಮಾನಸಿಕ ವಿಕಸನಕ್ಕೆ ಸಹಕಾರಿಯಾಗುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಹಾಕುವ ಮಹಾನ್ ನಾಯಕರ ವೇಷಭೂಷಣಗಳಿಂದ ದೇಶಭಕ್ತಿಯ ಪ್ರೇರಣೆ ದೊರೆಯುತ್ತದೆ’ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಂಗನಬಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗನಬಸವ ಶಾಲೆಯಲ್ಲಿ ಕಲಿತು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ರಾಜಶೇಖರಯ್ಯ ಹಿರೇಮಠ, ಮಹಾಂತಯ್ಯ ಮಠಪತಿ ಸಾನ್ನಿಧ್ಯ ವಹಿಸಿದ್ದರು. ಶಿವಗೊಂಡ ಪಾರಗೊಂಡ ಅಧ್ಯಕ್ಷತೆ ವಹಿಸಿದ್ದರು. ದೇವರಾಜ ಅರಸು ಹಿಂದುಳಿದ ವರ್ಗ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಲ್ಲನಗೌಡ ಜಿ. ಬಿರಾದಾರ ಉದ್ಘಾಟನೆ ನೆರವೇರಿಸಿದರು.

ಅರುಣ ಡಿ. ಜೇವರಗಿ, ಬಸವರಾಜ ಪೂಜಾರಿ, ಸುಭಾಸ ಹ. ತಂಬ, ಮಲ್ಲು ದೇಸಾಯಿ, ಜಿ.ಆರ್ ನ್ಯಾಮಗೊಂಡ, ವಿರುಪಾಕ್ಷಿ ಮುತ್ತಗಿ, ಓಂಕಾರಗೌಡ ಪಾಟೀಲ, ಗುರನಗೌಡ ಬಿರಾದಾರ, ಗಂಗಾಧರ ಚೌಧರಿ, ವಿ.ಎಚ್ ಪುರೋಹಿತ, ಸಂಗಮೇಶ್ವರ ಜಂಗಶೆಟ್ಟಿ, ಆಡಳಿತಾಧಿಕಾರಿ ಅಪ್ಪು ಪತಂಗಿ ಇದ್ದರು.

ತಾಲ್ಲೂಕಿನ ರೋಣಿಹಾಳ ಗ್ರಾಮದ ಸಂಗನಬಸವ ವಿದ್ಯಾವರ್ಧಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಗಣ್ಯರು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.