ADVERTISEMENT

ಆಲಮಟ್ಟಿ | 3 ದಿನ, 40 ಸಾವಿರಕ್ಕೂ ಅಧಿಕ ಪ್ರವಾಸಿಗರ ಭೇಟಿ

ಪಾರ್ಕಿಂಗ್‌ ಸಮಸ್ಯೆ; ವಾಹನ ನಿಲುಗಡೆಗೆ ಪರದಾಡುವ ‍ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 6:03 IST
Last Updated 28 ಡಿಸೆಂಬರ್ 2023, 6:03 IST
ಆಲಮಟ್ಟಿಯ ವಿವಿಧ ಪ್ರವಾಸಿ ತಾಣಗಳು ಜನರಿಂದ ತುಂಬಿರುವುದು
ಆಲಮಟ್ಟಿಯ ವಿವಿಧ ಪ್ರವಾಸಿ ತಾಣಗಳು ಜನರಿಂದ ತುಂಬಿರುವುದು   

ಆಲಮಟ್ಟಿ: ವಾರಾಂತ್ಯ ಹಾಗೂ ರಜೆಯ ಕಾರಣ ಪ್ರವಾಸಿ ತಾಣ ಆಲಮಟ್ಟಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಡಿ.23ರಿಂದ ಡಿ.25ರ ವರೆಗೆ 40 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಕೋವಿಡ್ ಪೂರ್ವದಲ್ಲಿದ್ದ 2019ರಲ್ಲಿದ್ದ ಸ್ಥಿತಿ ಮತ್ತೇ ಮರುಕಳುಹಿಸಿದೆ. ವಸತಿ ವ್ಯವಸ್ಥೆಯ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ಬಸ್‌ಗಳ ಕೊರತೆಯ ಮಧ್ಯೆಯೂ ಆಲಮಟ್ಟಿಗೆ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಿದ್ದು, ಈ ಭಾಗದ ಹೋಟೆಲ್ ಹಾಗೂ ನಾನಾ ವಸ್ತುಗಳ ಮಾರಾಟಗಾರರಲ್ಲಿ ಸಂತಸ ಮೂಡಿಸಿದೆ.

ಹೆಚ್ಚಿದ ಪಾರ್ಕಿಂಗ್ ಸಮಸ್ಯೆ:

ADVERTISEMENT

ಸಂಗೀತ ಕಾರಂಜಿ, ಲೇಸರ್ ಫೌಂಟೇನ್ ಸಂಜೆ ಆರಂಭಗೊಳ್ಳವ ಕಾರಣ, ಸಂಜೆ ಆಲಮಟ್ಟಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಆದರೆ ವಾಹನ ಪಾರ್ಕಿಂಗ್ ಮಾಡುವುದೇ ಪ್ರವಾಸಿಗರಿಗೆ ದೊಡ್ಡ ಸಮಸ್ಯೆಯಾಗಿದೆ.

ಆಲಮಟ್ಟಿ ರಾಕ್ ಉದ್ಯಾನದ ಪಕ್ಕದಲ್ಲಿ ಪಾರ್ಕಿಂಗ್ ಜಾಗವಿದೆ. ಆದರೆ ಅದಕ್ಕೂ ಸಂಗೀತ ಕಾರಂಜಿ ಉದ್ಯಾನಕ್ಕೂ ಒಂದು ಕಿ.ಮೀಗೂ ಹೆಚ್ಚು ಅಂತರವಿದೆ.

ಎಲ್ಲರೂ ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿ ಅಣೆಕಟ್ಟು ವೃತ್ತದ ರಸ್ತೆಯ ಎರಡೂ ಬದಿ ವಾಹನ ಪಾರ್ಕಿಂಗ್ ಮಾಡುತ್ತಾರೆ. ಆದರೆ, ಕಳೆದೆರೆಡು ದಿನಗಳಿಂದ ಎರಡೂ ಕಡೆ ಪಾರ್ಕಿಂಗ್ ಮಾಡಿದರೂ ಜಾಗ ಸಿಗದೇ ಪ್ರವಾಸಿಗರು ಪರದಾಡುವಂತಾಗಿದೆ. ಈ ಪಾರ್ಕಿಂಗ್ ಸಾಲು ಪ್ರವಾಸಿ ಮಂದಿರ ದಾಟುವರೆಗೂ ಮುಟ್ಟಿತ್ತು.

ಉದ್ಯಾನ ವೀಕ್ಷಣೆಯ ನಂತರ ವಾಹನ ಹೊರತೆಗೆಯಲು ಪ್ರವಾಸಿಗರು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದರು.ಲ 

ಆಲಮಟ್ಟಿಯ ವಿವಿಧ ಪ್ರವಾಸಿ ತಾಣಗಳು ಜನರಿಂದ ತುಂಬಿರುವುದು

6.30ರವರೆಗೆ ಅವಕಾಶ ನೀಡಿ:  ಹಗಲು ವೇಳೆಯಲ್ಲಿ ತೆರೆದಿರುವ ರಾಕ್ ಉದ್ಯಾನ ಸಂಜೆ 5.30ಕ್ಕೆ ಬಂದ್ ಆಗುತ್ತದೆ. ಆದರೆ 5.30ರ ನಂತರ ನೂರಾರು ಸಂಖ್ಯೆಯ ಪ್ರವಾಸಿಗರು ದೂರದಿಂದ ಆಗಮಿಸುತ್ತಿದ್ದು, ಅವರು ರಾಕ್ ಉದ್ಯಾನ ಪ್ರವೇಶಕ್ಕೆ ಅವಕಾಶವಿಲ್ಲದೇ ಸಿಬ್ಬಂದಿ ಜತೆ ಜಗಳವಾಡುತ್ತಿದ್ದ ದೃಶ್ಯವೂ ಕಂಡು ಬಂತು.

ಆಲಮಟ್ಟಿಯ ವಿವಿಧ ಪ್ರವಾಸಿ ತಾಣಗಳು ಜನರಿಂದ ತುಂಬಿರುವುದು

ಈಗ ಟೂರ್ ಸೀಸನ್ ಇದ್ದು, ಹೆಚ್ಚು ಹೆಚ್ಚು ಪ್ರವಾಸಿಗರು ಆಲಮಟ್ಟಿಗೆ ಆಗಮಿಸುತ್ತಿದ್ದು, ಜನವರಿ ತಿಂಗಳು ಪೂರ್ತಿ ರಾಕ್ ಉದ್ಯಾನ ಸಂಜೆ 6.30ರ ವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಎಂದು ಹಲವು ಪ್ರವಾಸಿಗರು ತಿಳಿಸಿದರು.

40 ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಭೇಟಿ:

ಆಲಮಟ್ಟಿಯ ವಿವಿಧ ಪ್ರವಾಸಿ ತಾಣಗಳು ಜನರಿಂದ ತುಂಬಿರುವುದು

ಡಿ.23ರಂದು 77 ಎಕರೆ ಉದ್ಯಾನಕ್ಕೆ (ಸಂಗೀತ ಕಾರಂಜಿ, ಮೊಘಲ್ ಉದ್ಯಾನ ಇರುವ) 11,212, ಡಿ.24ರಂದು 11,197, ಡಿ.25ರಂದು 6033 ಪ್ರವಾಸಿಗರು ಭೇಟಿ ನೀಡಿದ್ದಾರೆಂದು ಕೆಬಿಜೆಎನ್ ಎಲ್ ಕಿರಿಯ ಎಂಜಿನಿಯರ್ ಶಂಕ್ರಯ್ಯ ಮಠಪತಿ ತಿಳಿಸಿದರು.

ಆಲಮಟ್ಟಿಯ ವಿವಿಧ ಪ್ರವಾಸಿ ತಾಣಗಳು ಜನರಿಂದ ತುಂಬಿರುವುದು

ರಾಕ್ ಉದ್ಯಾನಕ್ಕೆ ಡಿ.23ರಂದು 4267, ಡಿ.24ಕ್ಕೆ 5349, ಡಿ.25ಕ್ಕೆ 2538 ಪ್ರವಾಸಿಗರು ಭೇಟಿ ನೀಡಿದ್ದಾರೆ. ಮೂರು ದಿನಗಳಲ್ಲಿ ಕೃಷ್ಣಾ ಉದ್ಯಾನಕ್ಕೆ 1883, ಲವಕುಶ ಉದ್ಯಾನಕ್ಕೆ 1678 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಆರ್.ಎಫ್.ಒ ಮಹೇಶ ಪಾಟೀಲ ತಿಳಿಸಿದರು.  ಒಟ್ಟು ಮೂರು ದಿನಗಳಲ್ಲಿ 44,157 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪಾರ್ಕಿಂಗ್ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು
ಡಿ. ಬಸವರಾಜು ಸೂಪರಿಂಟೆಂಡಿಂಗ್ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.