ವಿಜಯಪುರ: ‘ತಾಯಿ ದೇವರ ಪವಿತ್ರ ಸೃಷ್ಟಿ. ನಮಗೆ ಜೀವ ನೀಡುವ ಮೂಲ. ಅವಳು ನಿಸ್ವಾರ್ಥ ಪ್ರೀತಿ, ತ್ಯಾಗ, ಕ್ಷಮೆ ಮತ್ತು ತಾಳ್ಮೆಯ ಪ್ರತಿಮೆ’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲ್ಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ವಿಶ್ವ ತಾಯಂದಿರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಾತ್ಸಲ್ಯದ ಮೂರ್ತಿಯಾದ ತಾಯಿಯು ತನ್ನ ಹಸಿವು, ದಣಿವು ಮರೆತು ಮಕ್ಕಳ ಸಂತೋಷ, ಗೆಲುವನ್ನು ತನ್ನ ಜೀವನದ ಗುರಿಯಾಗಿಸಿಕೊಂಡು ಅವಿರತವಾಗಿ ಶ್ರಮಿಸುವಳು. ಮಗುವಿನ ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಯನ್ನು ನಿರ್ಮಿಸುವ ಮೂಲಾಧಾರವೇ ತಾಯಿಯಾಗಿದ್ದಾಳೆ’ ಎಂದು ಹೇಳಿದರು.
ಸಾಹೇಬಲಾಲ ವಾಲೀಕಾರ ಮಾತನಾಡಿ, ‘ಮಕ್ಕಳಿಗೆ ಸೂಕ್ತ ಮಾರ್ಗದಲ್ಲಿ ಮುನ್ನಡೆಸಿ, ಜೀವನದಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡುವ ಮಾರ್ಗದರ್ಶಕ ಆತ್ಮವೇ ತಾಯಿ’ ಎಂದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ, ವಿಶ್ವನಾಥ ಕಲಗೊಂಡ, ಸುನಂದಾ ಹುಣಶ್ಯಾಳ, ನವೀನ ಬಂಡೆನ್ನವರ, ಜಯಶ್ರೀ ಬಂಗಾರಿ, ಸಚೀನ ಅವಟಿ, ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.