ADVERTISEMENT

ಎಂ.ಆರ್‌.ಎನ್‌.: ಉದ್ಯೋಗ ಮೇಳ ಆಗಸ್ಟ್‌ 19ಕ್ಕೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 14:51 IST
Last Updated 13 ಆಗಸ್ಟ್ 2022, 14:51 IST
ಸುರೇಶ ಬಿರಾದಾರ
ಸುರೇಶ ಬಿರಾದಾರ   

ವಿಜಯಪುರ: ಎಂ.ಆರ್‌.ಎನ್‌.(ನಿರಾಣಿ) ಫೌಂಡೇಶನ್‌ ಮತ್ತು ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಆಗಸ್ಟ್‌ 19ರಂದು ಬೆಳಿಗ್ಗೆ 9ರಿಂದ 4ರ ವರೆಗೆ ನಗರದಲ್ಲಿ ಬೃಹತ್‌ ಉದ್ಯೋಗ ಮೇಳ ಏರ್ಪಡಿಸಲಾಗಿದೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದಶಾಂತಿನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಶ ಬಿರಾದಾರ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿ.ಇ. ಸೇರಿದಂತೆ ಯಾವುದೇ ಪದವಿ ಪಡೆದ ನಿರುದ್ಯೋಗಗಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಈ ಉದ್ಯೋಗ ಮೇಳದಲ್ಲಿ 70ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿ, ತಮಗೆ ಬೇಕಾದ ಅರ್ಹರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲಿದ್ದು, ಅರ್ಹರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಹಲವಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಮತ್ತು ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ. ಉದ್ಯೋಗ ಕಳೆದುಕೊಂಡವರಿಗೆ ಆಸರೆಯಾಗಲು ಹಾಗೂ ಈಗಾಗಲೇ ಪದವಿ ಪೂರ್ಣಗೊಳಿಸಿರುವವರಿಗೆ ಈ ಉದ್ಯೋಗ ಮೇಳ ಅನುಕೂಲವಾಗಲಿದೆ ಎಂದರು.

ಉದ್ಯೋಗ ಆಕಾಂಕ್ಷಿಗಳು ಅವಶ್ಯಕ ಶೈಕ್ಷಣಿಕ ದಾಖಲೆಗಳ ಪ್ರತಿಗಳು, ಪಾಸ್‌ಪೋರ್ಟ್‌ ಸೈಜ್‌ ಫೋಟೊ, ಆಧಾರ್‌ ಕಾರ್ಡ್‌, ಸ್ವ ವಿವರ ಅರ್ಜಿಯೊಂದಿಗೆ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಮಾಹಿತಿಗಾಗಿ ಇ–ಮೇಲ್‌ ವಿಳಾಸ: jobfair.mrnf@gmail.com, ಮೊಬೈಲ್‌ ಸಂಖ್ಯೆ: 9071772722, 9071776454, 9945000793 ಸಂಪರ್ಕಿಸಬಹುದು ಎಂದರು.

ವಿಧಾನ ಪರಿಷತ್‌ ಪದವೀಧರ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹನುಮಂತ ನಿರಾಣಿ ಅವರು ಹೆಚ್ಚಿನ ಮತಗಳಿಂದ ಜಯ ಗಳಿಸಿರುವ ಹಿನ್ನೆಲೆಯಲ್ಲಿ ನಿರುದ್ಯೋಗಿ ಪದವೀಧರರಿಗೆ ಅನುಕೂಲ ಮಾಡಿಕೊಡುವ ಸದಾಶಯದಿಂದ ಈ ಶಿಬಿರ ಆಯೋಜಿಸಿದ್ದಾರೆ. ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಈ ಶಿಬಿರಕ್ಕೆ ಅಗತ್ಯ ಸಹಕಾರ, ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.

ಫೌಂಡೇಶನ್‌ ಕಾರ್ಯನಿರ್ವಾಹಕ ನಿರ್ದೇಶಕರಾದ ಸಂಗಮೇಶ ನಿರಾಣಿ ಅವರು ನೇತೃತ್ವದಲ್ಲಿ ಎಂ.ಆರ್‌.ಎನ್‌.(ನಿರಾಣಿ) ಫೌಂಡೇಶನ್‌ ಸ್ವ–ಉದ್ಯೋಗ ತರಬೇತಿ, ಆರೋಗ್ಯ ಸೇವೆ, ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಈರಣ್ಣ ಪಟ್ಟಣಶೆಟ್ಟಿ, ರಾಜು ಕಳಸಗೊಂಡ, ಈರಣ್ಣ ಹೇರಲಗಿ, ಐ.ಜಿ.ನ್ಯಾಮಗೌಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.