ಮುದ್ದೇಬಿಹಾಳ: ಪಟ್ಟಣದ ಲಾಡ್ಜ್‌ವೊಂದರ ಮೇಲೆ ಶನಿವಾರ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಕೋಳೂರು ತಾಂಡಾದ ಅನಿಲ್ ಜಾಧವ, ಲಾಡ್ಜ್ ಮ್ಯಾನೇಜರ್ ಉಡುಪಿ ಜಿಲ್ಲೆ ಕಾರ್ಕಳದ ರಘುನಾಥ ಶೆಟ್ಟಿ, ಕಾಪು ತಾಲ್ಲೂಕಿನ ದಿನೇಶ ಶೆಟ್ಟಿ, ಚಿಕ್ಕಮಗಳೂರಿನ ಗೌತಮ, ಯಾದಗಿರಿ ಜಿಲ್ಲೆ ಹುಣಸಗಿಯ ಭೀಮರಾಯ ಬೂದಿಹಾಳ ಬಂಧಿತ ಆರೋಪಿಗಳು. ಲಾಡ್ಜ್ ಮಾಲೀಕ ಅಜಯಕುಮಾರ ಶೆಟ್ಟಿ ಮೇಲೂ ಪ್ರಕರಣ ದಾಖಲಾಗಿದೆ.
ಸಿಪಿಐ ಮೊಹ್ಮದ್ ಫಸಿವುದ್ದೀನ್, ಪಿಎಸ್‌ಐ ಸಂಜಯ ತಿಪರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.