ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಎನ್.ಎಸ್.ಯೂ.ಐ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರದ ಸರ್ಕಾರದ ವಿರುದ್ಧ ಮತಗಳ್ಳತನ ಪ್ರಕರಣವನ್ನು ಖಂಡಿಸಿ ಸಾರಿಗೆ ಘಟಕದ ಬಸ್‌ಗೆ ಸ್ಟಿಕ್ಕರ್ ಅಂಟಿಸಿದರು.
ಮುದ್ದೇಬಿಹಾಳ: ದೇಶದಲ್ಲಿ ನಡೆಯುತ್ತಿರುವ ಮತಕಳ್ಳತನ ಪ್ರಕರಣದ ವಿರುದ್ಧ ಮುದ್ದೇಬಿಹಾಳ ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಭಾನುವಾರ ನಗರದ ಸಾರಿಗೆ ನಿಲ್ದಾಣದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಚುನಾವಣೆ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ವೋಟ್ ಚೋರಿ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಬಸ್‌ಗಳಿಗೆ ಪೋಸ್ಟರ್ ಹಾಗೂ ಸ್ಟೀಕರ್‌ಗಳನ್ನು ವಾಹನಗಳಿಗೆ ಹಾಗೂ ಗೋಡೆಗಳಿಗೆ ಅಂಟಿಸಲಾಯಿತು.
ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಆಗಿರುವುದು ಮತಗಳ್ಳತನದಿಂದ ಆಗಿದ್ದಾರೆ ಎಂಬುದು ಹಲವು ಘಟನೆಗಳಿಂದ ಸಾಬೀತಾಗುತ್ತಿದೆ. ಸಂವಿಧಾನ ಬದ್ಧವಾಗಿ ಪ್ರಜಾಪ್ರಭುತ್ವದಲ್ಲಿ ಜನರಿಂದ ಮತಗಳಿಸದೇ ಮತಗಳ್ಳತನ ಮಾಡಿ ಸರ್ಕಾರ ನಡೆಸುತ್ತಿರುವುದಕ್ಕೆ ಬಿಜೆಪಿಗರಿಗೆ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಮಾತನಾಡಿ, ಮುದ್ದೇಬಿಹಾಳ ಮತಕ್ಷೇತ್ರದಲ್ಲೂ ಅಲ್ಪಸಂಖ್ಯಾತ ಸಮುದಾಯದ ಹಲವರ ಮತಗಳು ಮತಪಟ್ಟಿಯಲ್ಲಿ ಕಾಣೆಯಾಗಿವೆ. ಅವರು ಜೀವಂತ ಇದ್ದರೂ ಅವರ ಹೆಸರು ಪಟ್ಟಯಲ್ಲಿ ಡಿಲಿಟ್ ಮಾಡಲಾಗಿದದೆ.ಈ ಕುರಿತು ತನಿಖೆ ನಡೆಸಬೇಕಾಗಿದೆ ಎಂದು ಹೇಳಿದರು.
ಮುದ್ದೇಬಿಹಾಳ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಮೊಹಮ್ಮದ್ ಇಲಿಯಾಸ್ ಢವಳಗಿ, ವಿಜಾಪುರ ಜಿಲ್ಲಾ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ರಫೀಕ್ ಶಿರೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ , ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಚಲವಾದಿ, ಮುಖಂಡ ಸಿಕಂದರ್ ಜಾನ್ವೆಕರ್, ರಾಜು ರಾಯಗೊಂಡ, ಶರಣು ಚಲವಾದಿ, ಅಬೂಬಕರ್ ಹಡಗಲಿ ,ರಂಜಾನ್ ನದಾಫ, ಸಂಗು ಚಲವಾದಿ ,ತೌಸಿಫ್ ನಾಯ್ಕೋಡಿ , ಜಾಕಿರ್ ಮೂಲಮನಿ ,ಗುರು ಬಿರಾದಾರ , ಕಮಲಾ ಭಜಂತ್ರಿ, ಮಹಬೂಬಿ ಬಾಗವಾನ, ಶಿವಲೀಲಾ ಬಿರಾದಾರ್, ನೀಲಮ್ಮ ಚಲವಾದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.