ADVERTISEMENT

ಮುದ್ದೇಬಿಹಾಳ | ಕಚೇರಿ ಸಿಬ್ಬಂದಿಗೆ ತಹಶೀಲ್ದಾರ್‌ ತರಾಟೆ!

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 7:09 IST
Last Updated 8 ಸೆಪ್ಟೆಂಬರ್ 2025, 7:09 IST
ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ತಹಸೀಲ್ದಾರ್ ಕೀರ್ತಿ ಚಾಲಕ ಅವರು ಬಿಎಲ್‌ಓಗಳಿಗೆ ಸೂಚನೆ ನೀಡಿದರು
ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ತಹಸೀಲ್ದಾರ್ ಕೀರ್ತಿ ಚಾಲಕ ಅವರು ಬಿಎಲ್‌ಓಗಳಿಗೆ ಸೂಚನೆ ನೀಡಿದರು   

ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶಕ್ಕಾಗಿ ಆಗಮಿಸಿದ್ದ ಬಿಎಲ್‌ಒಗಳಿಗೆ ಕನಿಷ್ಠ ಮೂಲ ಸೌಕರ್ಯವನ್ನು ಒದಗಿಸದೆ ಇರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತಹಶೀಲ್ದಾರ್ ಕೀರ್ತಿ ಚಾಲಕ ಅವರು ತಮ್ಮ ಕಚೇರಿ ಚುನಾವಣಾ ವಿಭಾಗದ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

2012 ಹಾಗೂ 2025ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳನ್ನು ತಾಳೇ ಹಾಕಲು ಬಿಎಲ್‌ಒಗಳಿಗೆ ಸೂಚನೆಗಳನ್ನು ನೀಡಲು ಕರೆದಿದ್ದ ಸಭೆಯಲ್ಲಿ ಈ ಬೆಳವಣಿಗೆ ನಡೆಯಿತು. ಸ್ವತಃ ತಹಸೀಲ್ದಾರ್‌ರೇ ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳನ್ನು ತಿಳಿ ಹೇಳಿದರು.

ಈ ವೇಳೆ ಬಿಎಲ್‌ಒಗಳು ಕೂಡುವುದಕ್ಕೆ ಒಂದು ಕಡೆ ಮ್ಯಾಟ್ ವ್ಯವಸ್ಥೆ ಇಲ್ಲದಿರುವುದು, ಬಂದಿರುವ ಬಿಎಲ್‌ಒಗಳಿಗೆ ಕುಡಿವ ನೀರು, ಚಹಾ ವ್ಯವಸ್ಥೆಯನ್ನು ಮಾಡದೇ ಇದ್ದದ್ದಕ್ಕೆ ಚುನಾವಣಾ ಶಾಖೆಯ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಶಿರಸ್ತೇದಾರ ಶಕುಂತಲಾ ಸಜ್ಜನ, ಎಂ.ಎಸ್.ಬಾಗೇವಾಡಿ ಅವರಿಗೆ ತಹಸೀಲ್ದಾರ್‌ರು ಬಿಎಲ್‌ಒಗಳಿಗೆ ಕನಿಷ್ಠ ಸೌಲಭ್ಯ ಒದಗಿಸಲು ಏನು ಕಷ್ಟ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ಬಿಎಲ್‌ಒಗಳು ಕಚೇರಿಯ ವರಾಂಡ , ಚುನಾವಣಾ ಶಾಖೆಯ ಬ್ಯಾಟರಿ ಇಡುವ ಟೇಬಲ್ ಬಳಿ ನಿಂತು ಮತದಾರರ ಪಟ್ಟಿಯನ್ನು ತಾಳೆ ಹಾಕುತ್ತಿದ್ದ ದೃಶ್ಯಗಳು ಕಂಡು ಬಂತು.

ಫೋಟೋ:7-ಎಂ.ಬಿ.ಎಲ್‌05-ಎ ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿಯ ವರಾಂಡದಲ್ಲಿ ಕೂತು ಬಿಎಲ್‌ಒ ಒಬ್ಬರು ಮತದಾರರ ಪಟ್ಟಿ ಪರಿಶೀಲನೆ ನಡೆಸಿದರು.
ಫೋಟೋ:7-ಎಂ.ಬಿ.ಎಲ್‌05ಬಿ ಮುದ್ದೇಬಿಹಾಳದ ಚುನಾವಣಾ ಶಾಖೆಯ ಬ್ಯಾಟರಿ ಇಡುವ ಟೇಬಲ್ ಬಳಿ ನಿಂತು ಬಿಎಲ್‌ಒ ಒಬ್ಬರು ಮತದಾರರ ಪಟ್ಟಿ ಪರಿಶೀಲನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.