ADVERTISEMENT

ಮುದ್ದೇಬಿಹಾಳ: ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆಯಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 3:14 IST
Last Updated 26 ಆಗಸ್ಟ್ 2025, 3:14 IST
ಮುದ್ದೇಬಿಹಾಳ ಪಟ್ಟಣದ ಹುಡ್ಕೋ 14ನೇ ಕ್ರಾಸ್‌ನಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸಚಿನ್‌ ಕೌಶಿಕ್ ಅವರ ಮನೆ ಕಳುವಾದ ಹಿನ್ನೆಲೆಯಲ್ಲಿ ಸೋಮವಾರ ಶ್ವಾನದಳ ಪರಿಶೀಲನೆ ನಡೆಸಿತು
ಮುದ್ದೇಬಿಹಾಳ ಪಟ್ಟಣದ ಹುಡ್ಕೋ 14ನೇ ಕ್ರಾಸ್‌ನಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸಚಿನ್‌ ಕೌಶಿಕ್ ಅವರ ಮನೆ ಕಳುವಾದ ಹಿನ್ನೆಲೆಯಲ್ಲಿ ಸೋಮವಾರ ಶ್ವಾನದಳ ಪರಿಶೀಲನೆ ನಡೆಸಿತು   

ಮುದ್ದೇಬಿಹಾಳ: ಇಲ್ಲಿನ ಜಿಲ್ಲಾ ನ್ಯಾಯಾಲಯದ ಐದನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಚಿನ್‌ ಕೌಶಿಕ್‌ ಅವರು ಬಾಡಿಗೆ ಇರುವ ಹುಡ್ಕೋ 14 ನೇ ಕ್ರಾಸ್‌ನ ಮನೆಯಲ್ಲಿ ಭಾನುವಾರ ತಡರಾತ್ರಿ ಕಳ್ಳತನ ನಡೆದಿದೆ.

ನ್ಯಾಯಾಧೀಶರು ಊರಿಗೆ ಹೋದ ವೇಳೆಯಲ್ಲಿ ಮನೆ ಕಳ್ಳತನ ಮಾಡಲಾಗಿದೆ.  ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮೊಹ್ಮದ್‌ ಫಸಿವುದ್ದೀನ್, ಪಿಎಸ್‌ಐ ಸಂಜಯ ತಿಪರೆಡ್ಡಿ ಭೇಟ ನೀಡಿ ಪರಿಶೀಲನೆ ನಡೆಸಿದರು.

ಸಿವಿಲ್ ನ್ಯಾಯಾಧೀಶರಾದ ರವೀಂದ್ರ ಕಟ್ಟಿಮನಿ, ರಾಮಮೂರ್ತಿ ಎನ್, ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಭೇಟಿ ಮಾಡಿ ಘಟನೆಯ ಮಾಹಿತಿ ಪಡೆದುಕೊಂಡರು.

ADVERTISEMENT

ಮಧ್ಯಾಹ್ನದ ಹೊತ್ತಿಗೆ ಬೆರಳಚ್ಚು ಹಾಗೂ ಶ್ವಾನದಳದ ತಂಡ ಪರಿಶೀಲನೆ ನಡೆಸಿದರು. ಶ್ವಾನದಳದ ತಂಡದಿಂದ ಪರಿಶೀಲನೆ ನಡೆಸಿದಾಗ 12, 13ನೇ ಕ್ರಾಸ್‌ನತ್ತ ತೆರಳಿ ವಾಪಸ್ ನ್ಯಾಯಾಧೀಶರ ಮನೆಗೆ ಮರಳಿತು.

ಈ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಸಿ ಮೂಲದವರಾದ ನ್ಯಾಯಾಧೀಶ ಕೌಶಿಕ್‌ ಅವರು ಮುದ್ದೇಬಿಹಾಳಕ್ಕೆ ವಾಪಸ್‌ ಬಂದ ಬಳಿಕ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.