ADVERTISEMENT

ವಿಜಯಪುರ: ಕುಖ್ಯಾತ ರೌಡಿ ಬಾಗಪ್ಪ ಹರಿಜನ ಕೊಲೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 17:58 IST
Last Updated 11 ಫೆಬ್ರುವರಿ 2025, 17:58 IST
   

ವಿಜಯಪುರ: ಭೀಮಾ ತೀರದ ಕುಖ್ಯಾತ ರೌಡಿ ಚಂದಪ್ಪ ಹರಿಜನನ ಸಹಚರ ಬಾಗಪ್ಪ ಹರಿಜನನನ್ನು ನಗರದ ಆಕಾಶವಾಣಿ ಬಳಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ವಿಜಯಪುರ, ಕಲಬುರಗಿ ಸೇರಿದಂತೆ ಭೀಮಾತೀರದಲ್ಲಿ ನಡೆದ ಹಲವಾರು ಅಪರಾಧ ಪ್ರಕರಣಗಳಲ್ಲಿ ಬಾಗಪ್ಪ ಹರಿಜನ ಭಾಗಿಯಾಗಿದ್ದ.  

ಬಾಗಪ್ಪ ಹರಿಜನ ಮೇಲೆ ವಿಜಯಪುರ ಜಿಲ್ಲಾ ಸೆಷನ್ಸ್ ಕೋರ್ಟ್‌ ಆವರಣದಲ್ಲಿ 2017ರ ಆಗಸ್ಟ್‌ 7ರಂದು ಶೂಟೌಟ್‌ ನಡೆದಿತ್ತು. ಆರು ಗುಂಡುಗಳು ತಗುಲಿದ್ದವು, ಅದೃಷ್ಟವಶಾತ್‌ ಅಂದು ಬದುಕುಳಿದಿದ್ದನು. ಈ ಘಟನೆ ನಂತರ ಬಾಗಪ್ಪ ಭೂಗತನಾಗಿದ್ದನು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.