ADVERTISEMENT

ಕೊಲ್ಹಾರ: ನಮ್ಮೂರ ಗುರುಮಠ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 15:42 IST
Last Updated 24 ಫೆಬ್ರುವರಿ 2025, 15:42 IST
ಶ್ರೀ ಕೈಲಾಸನಾಥ ಮಹಾಸ್ವಾಮಿಗಳು, ಕೊಲ್ಹಾರ.
ಶ್ರೀ ಕೈಲಾಸನಾಥ ಮಹಾಸ್ವಾಮಿಗಳು, ಕೊಲ್ಹಾರ.   

ಕೊಲ್ಹಾರ: ಪಟ್ಟಣದ ರಾಜಗುರು ಹಿರೇಪಟ್ಟದೇವರ ಶೀಲವಂತ ಹಿರೇಮಠದ ನಮ್ಮೂರ ಗುರುಮಠ ಜಾತ್ರಾ ಮಹೋತ್ಸವವನ್ನು ಫೆ.25 ಮತ್ತು ಫೆ. 26ರಂದು ಹಮ್ಮಿಕೊಳ್ಳಲಾಗಿದೆ.

25ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ರಾಜ ಬೀದಿಗಳಲ್ಲಿ ರಾಜಗುರು ಹಿರೇಪಟ್ಟದೇವರು ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ಉತ್ಸವ ಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ ಕುಂಭಮೇಳ, ಪುರವಂತರ ಸೇವೆ ಹಾಗೂ ಪ್ರಯಾಗ ರಾಜ ತ್ರಿವೇಣಿ ಸಂಗಮದ ಮಹಾಕುಂಭ ಮೆರವಣಿಗೆ ಉತ್ಸವ ನಡೆಯುವುದು.

‘26ರಂದು ಬೆಳಿಗ್ಗೆ 11 ಗಂಟೆಗೆ ಮಹಾಶಿವರಾತ್ರಿ ಮಹೋತ್ಸವ 1008 ಶಿವಲಿಂಗಗಳ ದರ್ಶನ, ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮ, ಜನಜಾಗೃತಿ ಧರ್ಮಸಭೆ ನಂತರ ಮಹಾರಥೋತ್ಸವ ಜರುಗುವುದು’ ಎಂದು ಶ್ರೀಮಠದ ಕೈಲಾಸನಾಥ ಮಹಾಸ್ವಾಮಿಗಳು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.