ADVERTISEMENT

ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 15:01 IST
Last Updated 26 ಡಿಸೆಂಬರ್ 2020, 15:01 IST
ವಿಜಯಪುರದ ಪಿ.ಡಿ.ಜೆ. ಪ್ರೌಢಶಾಲೆಯ ಎದುರು ನಿವೃತ್ತ ಸೈನಿಕ ಶಿವಶರಣಪ್ಪ ವಾಲಿ ಅವರ ನಂದಿನಿ ಪ್ರಾಂಚೈಸಿಯಲ್ಲಿ ಏರ್ಪಡಿಸಿದ್ದ ನಂದಿನಿ ಸಿಹಿ ಉತ್ಸವ ಮತ್ತು ಚೀಸ್ ಫೆಸ್ಟ್ ಅನ್ನು ಶಸ್ತ್ರ ಚಿಕಿತ್ಸಕ ಡಾ.ಡಿ.ಸಿ.ಪಾಟೀಲ್ ಉದ್ಘಾಟಿಸಿದರು
ವಿಜಯಪುರದ ಪಿ.ಡಿ.ಜೆ. ಪ್ರೌಢಶಾಲೆಯ ಎದುರು ನಿವೃತ್ತ ಸೈನಿಕ ಶಿವಶರಣಪ್ಪ ವಾಲಿ ಅವರ ನಂದಿನಿ ಪ್ರಾಂಚೈಸಿಯಲ್ಲಿ ಏರ್ಪಡಿಸಿದ್ದ ನಂದಿನಿ ಸಿಹಿ ಉತ್ಸವ ಮತ್ತು ಚೀಸ್ ಫೆಸ್ಟ್ ಅನ್ನು ಶಸ್ತ್ರ ಚಿಕಿತ್ಸಕ ಡಾ.ಡಿ.ಸಿ.ಪಾಟೀಲ್ ಉದ್ಘಾಟಿಸಿದರು   

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಅಂಗವಾಗಿನಂದಿನಿ ಸಿಹಿ ಉತ್ಸವ ಏರ್ಪಡಿಸಲಾಗಿದೆ.

ನಂದಿನಿ ಸಿಹಿ, ಖಾರಾ ಉತ್ಪನ್ನಗಳು ಮತ್ತು ಕುಕಿಸ್ ದರದಲ್ಲಿ ಶೇ 10 ರಿಯಾಯತಿ ನೀಡಿದ್ದು, ಈ ಸಿಹಿ ಉತ್ಸವ ಜನವರಿ 7ರ ವರೆಗೆ ಇರುತ್ತದೆ ಎಂದುಒಕ್ಕೂಟದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸದಾಶಿವ ಹಾದಿಮನಿ ತಿಳಿಸಿದ್ದಾರೆ.

ಹಬ್ಬ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಗ್ರಾಹಕರು, ಗುಣಮಟ್ಟದ ನಂದಿನಿ ಉತ್ಪನ್ನಗಳನ್ನು ಖರೀದಿಸಿ, ಸೇವಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸಂಸ್ಥೆಯ ಆಶಯವಾಗಿದೆ ಎಂದರು.

ADVERTISEMENT

ಹಾಲು ಉತ್ಪಾದಕರ ಸಹಕಾರಿ ಸಂಸ್ಥೆಯಾಗಿರುವ ನಂದಿನಿ ಹಾಲಿನಿಂದ ವಿವಿಧ ಬಗೆಯ ಗುಣಮಟ್ಟದ ಸಿಹಿ ಉತ್ಪನ್ನಗಳು, ಐಸ್ ಕ್ರೀಮ್, ಖಾರಾ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಹೊಸದಾಗಿ ನಂದಿನಿ ಚೀಸ್, ಸಿಹಿ ಪೊಂಗಲ್, ಖಾರಾ ಪೊಂಗಲ್, ಬದಾಮ್ ಹಲ್ವಾ ಹೊಸದಾಗಿ ಸೇರ್ಪಡೆಯಾಗಿದ್ದು, ಗ್ರಾಹಕರು ಖರೀದಿಸಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಕೋರಿದರು.

ನಂದಿನಿ ಸಂಸ್ಥೆ ತಮ್ಮ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಅವಶ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ ಎಂದರು.

ಒಕ್ಕೂಟದ ಪ್ರಭಾರ ಮಾರುಕಟ್ಟೆ ವ್ಯವಸ್ಥಾಪಕ ಎಸ್.ಎಸ್.ಕುಂಬಾರ ಮಾತನಾಡಿ, ವರ್ಷದಲ್ಲಿ ಎರಡು ಬಾರಿ ನಂದಿನಿ ಉತ್ಪನ್ನಗಳನ್ನು ಜನಪ್ರೀಯಗೊಳಿಸಲು ಸಿಹಿ ಉತ್ಸವ ರಾಜ್ಯದಾದ್ಯಂತ ಆಚರಿಸುತ್ತಿದ್ದು, ನಂದಿನಿ ಪ್ರಾಂಚೈಸಿ ಮತ್ತು ಕ್ಷೀರಮಳಿಗೆಗಳಲ್ಲಿ ಶೇ 10 ರಷ್ಟು ರಿಯಾಯತಿ ದರದಲ್ಲಿ ಈ ಎಲ್ಲ ನಂದಿನಿ ಉತ್ಪನ್ನಗಳು ಲಭ್ಯವಿದ್ದು, ಗ್ರಾಹಕರು ತಮ್ಮ ಸಂಭ್ರಮವನ್ನು ನಂದಿನಿಯೊಂದಿಗೆ ಆಚರಿಸಲು ಮನವಿ ಮಾಡಿದರು.

ಒಕ್ಕೂಟದ ಉಪ ವ್ಯವಸ್ಥಾಪಕ ವೆಂಕಣ್ಣ ಯಡಹಳ್ಳಿ, ಮಾರುಕಟ್ಟೆ ಅಧಿಕಾರಿಗಳಾದ ಹೇಮಂತ ಬಂಕಾಪುರ, ಮಾರುಕಟ್ಟೆ ಸಹಾಯಕ ಹಣಮಂತ ಕುಂಬಾರ, ಅಣ್ಣಾರಾಯ ಕೋನಳ್ಳಿ, ಸಿ.ಎಂ.ಪಾಟೀಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.