ADVERTISEMENT

ಸಹಕಾರಿ ಸಂಘಗಳು ಅವಶ್ಯಕ: ಎಸ್.ಎಂ.ತೆಗ್ಗಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 12:34 IST
Last Updated 16 ಸೆಪ್ಟೆಂಬರ್ 2019, 12:34 IST
ವಿಜಯಪುರ ತಾಲ್ಲೂಕು ಆಹೇರಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಭೆಯನ್ನು ಬಂಥನಾಳ ವಿರಕ್ತಮಠದ ಚಿಲ್ಲಾಲಿಂಗ ಸ್ವಾಮೀಜಿ ಉದ್ಘಾಟಿಸಿದರು
ವಿಜಯಪುರ ತಾಲ್ಲೂಕು ಆಹೇರಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಭೆಯನ್ನು ಬಂಥನಾಳ ವಿರಕ್ತಮಠದ ಚಿಲ್ಲಾಲಿಂಗ ಸ್ವಾಮೀಜಿ ಉದ್ಘಾಟಿಸಿದರು   

ವಿಜಯಪುರ: ‘ಆರ್ಥಿಕ ಸಬಲತೆಗೆ ಸಹಕಾರಿ ಸಂಘಗಳು ಅವಶ್ಯಕವಾಗಿವೆ’ ಎಂದು ಶಿಬಿರಾಧಿಕಾರಿ ಎಸ್.ಎಂ.ತೆಗ್ಗಿ ಹೇಳಿದರು.

ತಾಲ್ಲೂಕಿನ ಆಹೇರಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಆಹೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

‘ಜಾನುವಾರುಗಳನ್ನು ಮಕ್ಕಳಂತೆ ಪೋಷಿಸಬೇಕು. ಕ್ರಮಬದ್ಧವಾದ ನೀರು, ಮೇವು ಪೂರೈಸಬೇಕು. ಇದಕ್ಕಾಗಿ ರೈತರು ವಿಶೇಷ ತರಬೇತಿ ಪಡೆಯುವುದು ಅವಶ್ಯಕವಾಗಿದೆ’ ಎಂದು ತಿಳಿಸಿದರು.

ADVERTISEMENT

ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿ, ‘ಸ್ವಾರ್ಥ, ಪಕ್ಷಪಾತ, ರಾಜಕೀಯ ರಹಿತವಾಗಿ ಸಹಕಾರಿ ಸಂಘಗಳು ಸರ್ವ ಸದಸ್ಯರ ಹಿತ ಕಾಯಲು ಬದ್ಧವಾಗಿರಬೇಕು. ಸದಸ್ಯರು ಕೂಡ ಸಂಘದೊಂದಿಗೆ ತಾಯಿ ಮಗುವಿನ ಸಂಬಂಧ ಹೊಂದಿರಬೇಕು’ ಎಂದು ಹೇಳಿದರು.

ಆಹೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ‘ಸಂಘದ ಪ್ರಗತಿಗೆ ಇಲಾಖೆಯೊಂದಿಗೆ ಸರ್ವ ಸದಸ್ಯರು ಕೈಜೋಡಿಸಿ ಆರ್ಥಿಕ ಪ್ರಗತಿಗೆ ನಾಂದಿ ಹಾಡಬೇಕು. ಸಂಘಟನೆಯಲ್ಲಿ ಯಾರೂ ಹೆಚ್ಚು ಕಡಿಮೆ ಇರುವುದಿಲ್ಲ. ಇಲ್ಲಿ ಎಲ್ಲರೂ ಸಮಾನರು. ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ಭಾವ ಎಲ್ಲರಲ್ಲಿ ಇದ್ದಾಗ ಮಾತ್ರ ಸಹಕಾರಿ ಸಂಘಗಳು ಬೆಳೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಆಹೇರಿ ಬಂಥನಾಳ ವಿರಕ್ತಮಠದ ಚಿಲ್ಲಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಡಾ.ಸುಚಿತ್ ಪಾಟೀಲ, ಮಲ್ಲು ವಾಲಿಕಾರ, ಶಿವಾಜಿ ಢಗೆ, ಚಿದಾನಂದಯ್ಯ ಹಿರೇಮಠ, ಮಲ್ಲನಗೌಡ ಬಿರಾದಾರ, ಎ.ಎಂ.ಮದಭಾವಿ, ಮಲ್ಲನಗೌಡ ಬಿರಾದಾರ, ನರಸಿಂಗ ರಜಪೂತ, ಹಣಮಂತ ರಜಪೂತ ಇದ್ದರು.

ಬಾಬು ಯಂಭತ್ನಾಳ ನಿರೂಪಿಸಿ, ಪ್ರವೀಣ ರಜಪೂತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.