ADVERTISEMENT

ಭೂ ಕಂಪನವಲ್ಲ: ಆತಂಕ ಬೇಡ

ಉತ್ನಾಳ ಗ್ರಾಮದಲ್ಲಿ ಭೂಮಿಯಿಂದ ಜೋರಾದ ಶಬ್ದ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 13:30 IST
Last Updated 17 ಫೆಬ್ರುವರಿ 2021, 13:30 IST
ವಿಜಯಪುರ ತಾಲ್ಲೂಕಿನ ಉತ್ನಾಳ ಗ್ರಾಮಕ್ಕೆ ಉಪವಿಭಾಗಾಧಿಕಾರಿ ಮತ್ತು ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ ಚರ್ಚಿಸಿದರು
ವಿಜಯಪುರ ತಾಲ್ಲೂಕಿನ ಉತ್ನಾಳ ಗ್ರಾಮಕ್ಕೆ ಉಪವಿಭಾಗಾಧಿಕಾರಿ ಮತ್ತು ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ ಚರ್ಚಿಸಿದರು   

ವಿಜಯಪುರ: ತಾಲ್ಲೂಕಿನ ಉತ್ನಾಳ ಗ್ರಾಮದಲ್ಲಿ ಭೂಕಂಪನ ಸಂಭವವಿರುವುದಿಲ್ಲ ಎಂದು ತಿಳಿಸಿರುವ ಉಪವಿಭಾಗಾಧಿಕಾರಿ ಮತ್ತು ಹಿರಿಯ ಭೂವಿಜ್ಞಾನಿಗಳ ತಂಡವು, ಗ್ರಾಮಸ್ಥರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ.

ಭೂಮಿಯಿಂದ ಜೋರಾದ ಶಬ್ದ ಹಾಗೂ ಕಂಪನದ ಅನುಭವ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ ಹಿನ್ನೆಲೆಯಲ್ಲಿಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಂಡವು ಬುಧವಾರ ಗ್ರಾಮಕ್ಕೆ ಭೇಟಿ ಮಾಡಿ ಪರಿಶೀಲಿಸಿತು.

ಭೂಮಿಯಿಂದ ಜೋರಾದ ಶಬ್ದ ಹಾಗೂ ಕಂಪನದ ಲಕ್ಷಣಗಳು ಕಂಡುಬಂದಿರುವುದಿಲ್ಲ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ADVERTISEMENT

ವಿಜಯಪುರ ಉಪವಿಭಾಗಾಧಿಕಾರಿಗಳಾದ ಬಲರಾಮ ಲಮಾಣಿ, ಹಿರಿಯ ಭೂವಿಜ್ಞಾನಿ ನಾಗಭೂಷಣ್, ಭೂಗರ್ಭ ಚಿದಂಬರಂ, ತಹಶೀಲ್ದಾರ್‌ ಮಲ್ಲಿಕಾರ್ಜುನ ಅರಕೇರಿ, ವಿಪತ್ತು ನಿರ್ವಹಣಾ ಅಧಿಕಾರಿ ರಾಕೇಶ ಜೈನಾಪೂರ, ಗಣಿ ಭೂಗರ್ಭ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.