ADVERTISEMENT

ಮುದ್ದೇಬಿಹಾಳ: ಬಿಜೆಪಿ ವಿರುದ್ಧ ಎನ್‌ಎಸ್‌ಯುಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:09 IST
Last Updated 20 ಅಕ್ಟೋಬರ್ 2025, 4:09 IST
<div class="paragraphs"><p>ಎಂ.ಬಿ.ಎಲ್‌ ಮುದ್ದೇಬಿಹಾಳದ ಬಸವೇಶ್ವರ ಸರ್ಕಲ್ ನಲ್ಲಿ ಎನ್.ಎಸ್.ಯೂ.ಐ ಹಾಗೂ ಯುವ ಕಾಂಗ್ರೆಸ್‌ನಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.</p></div>

ಎಂ.ಬಿ.ಎಲ್‌ ಮುದ್ದೇಬಿಹಾಳದ ಬಸವೇಶ್ವರ ಸರ್ಕಲ್ ನಲ್ಲಿ ಎನ್.ಎಸ್.ಯೂ.ಐ ಹಾಗೂ ಯುವ ಕಾಂಗ್ರೆಸ್‌ನಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

   

ಮುದ್ದೇಬಿಹಾಳ: ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಬಿಜೆಪಿ ನಾಯಕರು ಹಾಗೂ ಆರ್.ಎಸ್.ಎಸ್ ಸಂಘಟನೆ ವಿರುದ್ಧ ಶನಿವಾರ ಪಟ್ಟಣದಲ್ಲಿ ಯುವ ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಮಾತನಾಡಿ, ಸಂವಿಧಾನದಲ್ಲಿ ನಂಬಿಕೆ ಇಲ್ಲದ ಆರ್.ಎಸ್.ಎಸ್ ಹಾಗೂ ಸತ್ಯ ಹೇಳಿದ್ದನ್ನು ಅರಗಿಸಿಕೊಳ್ಳಲಾಗದ ಬಿಜೆಪಿಯ ಕೆಲವು ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು ಇದನ್ನು ಖಂಡಿಸುವುದಾಗಿ ಹೇಳಿದರು.

ADVERTISEMENT

ಕಾಂಗ್ರೆಸ್ ಮುಖಂಡ ಸಿಕಂದರ್ ಜಾನ್ವೇಕರ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಫೀಕ ಶಿರೋಳ, ಎಸ್.ಸಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ ಚಲವಾದಿ, ಪುರಸಭೆ ಸದಸ್ಯ ಶಿವು ಶಿವಪುರ,
ಕಾಂಗ್ರೆಸ್ ಮುಖಂಡ ಬಸವರಾಜ ಭಜಂತ್ರಿ, ಮುಖಂಡ ಬಾಬಾ ಪಟೇಲ್ ಬಿರಾದಾರ, ಸಮೀರ ದ್ರಾಕ್ಷಿ, ಕಾಂಗ್ರೆಸ್ ಮುಖಂಡ ಮುತ್ತು ಚಲವಾದಿ, ರಮಜಾನ್ ನದಾಫ, ರಾಜು ಚಲವಾದಿ, ನಜೀರ್ ದಂಡಿಯಾ, ಯಲ್ಲಪ್ಪ ಮ್ಯಾಗೇರಿ,ಅಭಿ ಕಲಾಲ, ರಾಮಣ್ಣ ನಾಯಕಮಕ್ಕಳ, ಯುನೂಸ್ ಬಾಗವಾನ, ರವಿ ಯರಝರಿ, ಯಮನಪ್ಪ ಚಲವಾದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.