
ಹೊರ್ತಿ: ಸಮೀಪದ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಮೊರಬಗಿ ಗ್ರಾಮದ ರೈತ ಸೂರ್ಯಕಾಂತ ತೀರ್ಥ ಅವರು ಸಂತ್ರಾ (ಕಿತ್ತಳೆ) ಹಣ್ಣು ಬೆಳೆದು ಲಾಭ ಗಳಿಸುತ್ತಿದ್ದಾರೆ.
ಮೂರು ವರ್ಷದ ಹಿಂದೆ ಮಹಾರಾಷ್ಟ್ರದ ಪುಣೆಯಿಂದ ₹250ಕ್ಕೆ ಒಂದರಂತೆ 2,500 ಸಸಿಗಳನ್ನು ತಂದು ಮೂರು ಎಕರೆಯಲ್ಲಿ ನಾಟಿ ಮಾಡಿ, ಹನಿ ನೀರಾವರಿ ಮೂಲಕ ಬೆಳೆಯನ್ನು ಬೆಳೆಯಲಾಗಿದೆ.
ಸಂತ್ರಾಕ್ಕೆ ವರ್ಷದಲ್ಲಿ ಒಂದೇ ಸಲ ಔಷಧ ಬಳಕೆ ಮಾಡಲಾಗುತ್ತಿದೆ. ಈ ಹಣ್ಣು ಪ್ರತಿ ಕೆ.ಜಿ.ಗೆ ₹30ರಿಂದ ₹40ರ ವರೆಗೆ ಅಥಣಿ ಮತ್ತು ವಿಜಯಪುರ ಜಿಲ್ಲೆಯ ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ವ್ಯಾಪಾರಸ್ಥರೇ ನಮ್ಮ ತೋಟಕ್ಕೆ ಬಂದು ಖರೀದಿಸುತ್ತಾರೆ. ಈ ಸಲ ಒಟ್ಟು 12 ಟನ್ ಸಂತ್ರಾ ಹಣ್ಣು ಬೆಳೆಯಲಾಗಿದೆ. ₹4ಲಕ್ಷ ಲಾಭ ತಂದುಕೊಂಡಿದ್ದೇವೆ ಎನ್ನುತ್ತಾರೆ ಪ್ರಗತಿಪರ ರೈತ ಸೂರ್ಯಕಾಂತ ತೀರ್ಥ. ಮಾಹಿತಿಗಾಗಿ ಅವರ ಮೊಬೈಲ್ ನಂ 9986799133 ಗೆ ಸಂಪರ್ಕಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.