ದೇವರಹಿಪ್ಪರಗಿ: ತಾಲ್ಲೂಕಿನ ಪಡಗಾನೂರ ಗ್ರಾಮದ ಹೊಲವೊಂದರ ಬಾವಿಯಲ್ಲಿ ಜೋಡಿ ಎತ್ತುಗಳು ಬಿದ್ದು ಸೋಮವಾರ ಸಾವಿಗೀಡಾದ ಘಟನೆ ಜರುಗಿದೆ.
ಪಡಗಾನೂರ ಗ್ರಾಮದ ಯಮನಪ್ಪ ವಡ್ಡೋಡಗಿ ಎಂಬುವವರಿಗೆ ಸೇರಿದ್ದ ಅಂದಾಜು ₹1.50 ಲಕ್ಷ ಮೌಲ್ಯದ ಎರಡು ಎತ್ತುಗಳು ಸಾವಿಗೀಡಾಗಿದೆ.
ಎತ್ತಿನಗಾಡಿಗೆ ಕಟ್ಟಿ ಅವುಗಳಿಗೆ ಮೇವು ತರಲು ತೆರಳಿದ ಸಂದರ್ಭದಲ್ಲಿ ಏಕಾಏಕಿ ಬೆದರಿದ ಎತ್ತುಗಳು ಕಟ್ಟಿದ್ದ ಗಾಡಿಯ ಸಮೇತ ಸಮೀಪದ ಭಾವಿಗೆ ಬಿದ್ದಿವೆ. ಘಟನಾ ಸ್ಥಳಕ್ಕೆ ಪಶು ವೈದ್ಯಕೀಯ ಆಸ್ಪತ್ರೆಯ ತಾಲ್ಲೂಕು ಸಹಾಯಕ ನಿರ್ದೇಶಕ ಭೀಮಾಶಂಕರ ಕನ್ನೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.