ADVERTISEMENT

ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 10:23 IST
Last Updated 28 ನವೆಂಬರ್ 2022, 10:23 IST
ವಿಜಯಪುರ ಜಿಲ್ಲಾ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘದಿಂದ ಶಾಸಕ ದೇವಾನಂದ ಚವ್ಹಾಣಗೆ ಸೋಮವಾರ ಮನವಿ ಸಲ್ಲಿಸಲಾಯಿತು 
ವಿಜಯಪುರ ಜಿಲ್ಲಾ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘದಿಂದ ಶಾಸಕ ದೇವಾನಂದ ಚವ್ಹಾಣಗೆ ಸೋಮವಾರ ಮನವಿ ಸಲ್ಲಿಸಲಾಯಿತು    

ವಿಜಯಪುರ: ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಶಾಸಕ ದೇವಾನಂದ ಚವ್ಹಾಣ ಅವರನ್ನು ಸೋಮವಾರ ಭೇಟಿಯಾಗಿ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಎನ್‌ಪಿಎಸ್ ರದ್ದುಪಡಿಸಿ, ಒಪಿಎಸ್ ಜಾರಿಗೊಳಿಸುವ ಪರವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಸಲ್ಲಿಸಲಾಯಿತು.

ನೂತನ ಪಿಂಚಣಿ ವ್ಯವಸ್ಥೆಯಿಂದ ಪ್ರಸ್ತುತ ನೌಕರರು ಅನುಭವಿಸುವ ಸಂಕಷ್ಟವನ್ನು ಶಾಸಕರ ಗಮನಕ್ಕೆ ತರಲಾಯಿತು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಶಾಸಕರು ತಕ್ಷಣವೇ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಹಾಗೂ ತಮ್ಮ ಪರವಾಗಿ ವಾದ ಮಂಡಿಸಿ ನಮ್ಮ ಪಕ್ಷದ ನಾಯಕರೊಂದಿಗೆ ಸೇರಿ, ಹಳೆಯ ಪಿಂಚಣಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಹಡಲಗೇರಿ, ಪ್ರಧಾನ ಕಾರ್ಯದರ್ಶಿ ಶಂಕರ ಖಂಡೇಕರ, ಮಾಧ್ಯಮ ಸಲಹೆಗಾರ ಎಚ್.ಕೆ.ಬೂದಿಹಾಳ, ಗೌರವ ಸಲಹೆಗಾರ ಜಗದೀಶ ಬೊಳಸೂರ, ರಂಗನಾಥ ದೇಸಾಯಿ, ಸಂಘಟಕರಾದ ಮಲ್ಲಿಕಾರ್ಜುನ ಭೂಸಗೊಂಡ,ರಾಜು ಬಿಸನಾಳ,ಸಂತೋಷ ಕುಲಕರ್ಣಿ, ಚನ್ನಯ್ಯ ಮಠಪತಿ, ಸಂತೋಷ ಜಾಹಗೀರದಾರ, ಸಂಗಮೇಶ ಬಂಡೆ, ಅಕ್ಕುಬಾಯಿ ನಾಯಕ, ಕವಿತಾ ಕಲ್ಯಾಣಪ್ಪಗೊಳ, ಲಕ್ಷ್ಮಿ ತೊರವಿ ಸೇರಿದಂತೆರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರ ಸಂಘದ ಜಿಲ್ಲಾ ಹಾಗೂ ವಿವಿಧ ತಾಲ್ಲೂಕು ಘಟಕದ ಪದಾಧಿಕಾರಿಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಸಾವಿತ್ರಿಬಾಯಿ ಫುಲೆ ಸಂಘ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.