ಇಂಡಿ : ತಾಲ್ಲೂಕಿನ ಗೋಳಸಾರ ಗ್ರಾಮದ ಪುಂಡಲಿಂಗ ಶಿವಯೋಗಿಗಳ 46 ನೇ ಪುಣ್ಯಾರಾಧನೆ ಜುಲೈ 13 ಮತ್ತು 14 ರಂದು ನಡೆಯಲಿದೆ. 13 ರಂದು ನಾಡಿನ ಭಜನಾ ಮೇಳಗಳಿಂದ ಭಜನೆ ನಡೆದರೆ, 14 ರಂದು ನಾಡಿನ ಪೂಜ್ಯರಿಂದ ಆಶೀರ್ವಚನ ನಡೆಯಲಿದೆ.
1906 ರಲ್ಲಿ ಜನಿಸಿದ ಪುಂಡಲಿಂಗ ಶಿವಯೋಗಿಗಳು 73 ವರ್ಷಗಳ ಕಾಲ ಸಂಸಾರಿಯಾಗಿ, ಸಾದಾ ಜೀವನ ಉನ್ನತ ವಿಚಾರಗಳೊಂದಿಗೆ ಬದುಕಿ ತಮ್ಮ ಉದಾತ್ತ ವಿಚಾರಗಳನ್ನು ಜನಮಾನಸದಲ್ಲಿ ಬಿತ್ತಿ, ಈ ನಾಡಿಗೆ ಹೆಸರುವಾಸಿಯಾಗಿದ್ದಾರೆ.
1970 ರಲ್ಲಿ ಕೆನಡಾ ದೇಶದ ಇತಿಹಾಸ ಉಪನ್ಯಾಸಕರೊಬ್ಬರು ಗೋಳಸಾರ ಮಠಕ್ಕೆ ಭೇಟಿ ನೀಡಿ, ಮೂರು ದಿನಗಳ ಕಾಲ ವಾಸ ಮಾಡಿ ಪೂಜ್ಯರ ದಿನಚರಿಯನ್ನು ವರ್ಣಿಸಿದ್ದಾರೆ. 1972 ರಲ್ಲಿ ಬರಗಾಲದ ಕಾಲದಲ್ಲಿ ತಮ್ಮ ಮನೆಯಲ್ಲಿದ್ದ 70 ಕ್ವಿಂಟಲ್ ಜೋಳದಿಂದ ಅಂಬಲಿಯನ್ನು ಮಾಡಿಸಿ, ಹಸಿದವರಿಗೆ ಊಟ ಬಡಿಸಿದ್ದರು. ಸರ್ವಧರ್ಮೀಯರಿಗೆ ಈ ಮಠ ಶಕ್ತಿ ಕೇಂದ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.