ADVERTISEMENT

ವಿಜಯಪುರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ: ಹಾರಿಬಿದ್ದ ಟಿನ್ ಶೀಟ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 8:44 IST
Last Updated 3 ಜೂನ್ 2019, 8:44 IST
ಮನೆ ಮೇಲಿನ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ.
ಮನೆ ಮೇಲಿನ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ.   

ವಿಜಯಪುರ: ನಗರ ಹಾಗೂ ಜಿಲ್ಲೆಯ ಹಲವೆಡೆ ಭಾನುವಾರ ತಡರಾತ್ರಿ ಹಾಗೂ ಸೋಮವಾರ ನಸುಕಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯ ಮೇಲಿನ ಟಿನ್ ಶೀಟ್ ಗಳು ಹಾರಿ ಬಿದ್ದಿವೆ.

ತಾಲ್ಲೂಕಿನ ಮದಬಾವಿ ತಾಂಡಾ1ರಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಮನೆಯಲ್ಲಿನ ವಸ್ತುಗಳು, ಟಿ.ವಿ, ಫ್ರಿಡ್ಜ್ ಹಾಗೂ ಧವಸ ಧಾನ್ಯಗಳಿಗೆ ಹಾನಿಯಾಗಿದೆ.

ಗಾಳಿಯ ರಭಸಕ್ಕೆ ಶೀಟ್‌ಗಳು ಪುಡಿ ಪುಡಿಯಾಗಿವೆ, ಇನ್ನೂ ಕೆಲವು ದೂರ ದೂರಕ್ಕೆ ಹಾರಿಹೋಗಿ ಬಿದ್ದಿವೆ.

ADVERTISEMENT
ಗಾಳಿ ರಭಸಕ್ಕೆ ಮನೆಯ ಶೀಟ್‌ ಪುಡಿಯಾಗಿವೆ.
ಮನೆಯ ಸಿಮೆಂಟ್‌ ಶೀಟ್‌ಗಳು ಪುಡಿಯಾಗಿ ಬಿದ್ದಿದ್ದು, ಒಳಗಿದ್ದ ವಸ್ತುಗಳು ಚಲ್ಲಾಪಿಲ್ಲಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.