ADVERTISEMENT

ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 12:13 IST
Last Updated 6 ಫೆಬ್ರುವರಿ 2021, 12:13 IST
ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತವಿರೋಧಿ ಕೃಷಿ ಮಾರುಕಟ್ಟೆ ತಿದ್ದುಪಡಿ ಕಾನೂನು ಹಿಂಪಡೆಯಲು ಆಗ್ರಹಿಸಿ ರಿಪಬ್ಲಿಕ್ ಸೇನಾ ರಾಷ್ಟ್ರೀಯ ಸಂಘಟನೆಯಿಂದ ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು 
ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತವಿರೋಧಿ ಕೃಷಿ ಮಾರುಕಟ್ಟೆ ತಿದ್ದುಪಡಿ ಕಾನೂನು ಹಿಂಪಡೆಯಲು ಆಗ್ರಹಿಸಿ ರಿಪಬ್ಲಿಕ್ ಸೇನಾ ರಾಷ್ಟ್ರೀಯ ಸಂಘಟನೆಯಿಂದ ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು    

ವಿಜಯಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವರೈತವಿರೋಧಿ ಕೃಷಿ ಮಾರುಕಟ್ಟೆ ತಿದ್ದುಪಡಿ ಕಾನೂನು ಹಿಂಪಡೆಯಲು ಆಗ್ರಹಿಸಿರಿಪಬ್ಲಿಕ್ ಸೇನಾ ರಾಷ್ಟ್ರೀಯ ಸಂಘಟನೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ವಿಭಾಗೀಯ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ, ರೈತ, ಯೋಧ ದೇಶದ ಬೆನ್ನೆಲಬು. ಇವರ ಶ್ರಮ ದೇಶವನ್ನು ಸಂರಕ್ಷಣೆ ಹಾಗೂ ಅಭಿವೃದ್ಧಿಯಲ್ಲಿಡುತ್ತದೆ. ಆದರೆ, ಈ ಇಬ್ಬರ ಮೂಳೆಯನ್ನೇ ಮುರಿಯುವ ಕೆಲಸ ಕೇಂದ್ರ ಸರ್ಕಾರದಿಂದ ಆಗುತ್ತಿದೆ ಎಂದು ಟೀಕಿಸಿದರು.

ಪ್ರಧಾನ ಮಂತ್ರಿಯವರ ರೈತ ವಿರೋಧಿ ನೀತಿಗಳು ದೇಶಕ್ಕೆ ಮಾರಕವಾಗಿವೆ. ಇವುಗಳಿಂದ ರೈತರು ಬಹುರಾಷ್ಟ್ರೀಯ ಕಂಪನಿಗಳ ಗುಲಾಮರಾಗುತ್ತಾರೆ ಎಂದರು.

ADVERTISEMENT

ರೈತ ವಿರೋಧಿ ಹಾಗೂ ಮಾರುಕಟ್ಟೆ ತಿದ್ದುಪಡಿ ಕಾನೂನು ಹಿಂಪಡೆಯಬೇಕು. ಬಂಡವಾಳ ಶಾಹಿಗಳ ಅನುಕೂಲಕ್ಕೆ ತಕ್ಕಂತೆ ರೈತರಿಗೆ ಮಾರಕವಾದ ಕಾನೂನು ಮಾಡಿರುವುದು ಖಂಡನೀಯ ಎಂದರು.

ಜಿಲ್ಲಾಧ್ಯಕ್ಷ ಲಕ್ಷ್ಮಣ ದೇವಾಪೂರ, ದಾಸು ರಾಠೋಡ, ಶಂಕರ ರಾಠೋಡ, ಪರಶುರಾಮ ನಾಟಿಕಾರ, ಶ್ರೀಕಾಂತ ಕುಲಕರ್ಣಿ, ಶಂಕರ ಕುಬಕಡ್ಡಿ, ಕೆ.ಕೆ. ಬನ್ನಟ್ಟಿ, ಭೀಮಾಶಂಕರಯ್ಯ ವಿರಕ್ತಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.