ADVERTISEMENT

ವಿಶ್ವ ಕಾರ್ಮಿಕ ದಿನ; ಮೊಳಗಿತು ಕಾರ್ಮಿಕ ವಿರೋಧಿ ನೀತಿಗಳಿಗೆ ಧಿಕ್ಕಾರ

ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 1 ಮೇ 2022, 12:20 IST
Last Updated 1 ಮೇ 2022, 12:20 IST
ವಿಶ್ವ ಕಾರ್ಮಿಕ ದಿನದ ಅಂಗವಾಗಿ ಜಂಟಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ವಿಜಯಪುರದ ಬಾರಾಕಮಾನ್‌ನಿಂದ ಗಗನ್‌ ಮಹಲ್‌ ವರೆಗೆ ಕಾರ್ಮಿಕರು ಬೃಹತ್‌ ಜಾಥಾ ನಡೆಸಿದರು
ವಿಶ್ವ ಕಾರ್ಮಿಕ ದಿನದ ಅಂಗವಾಗಿ ಜಂಟಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ವಿಜಯಪುರದ ಬಾರಾಕಮಾನ್‌ನಿಂದ ಗಗನ್‌ ಮಹಲ್‌ ವರೆಗೆ ಕಾರ್ಮಿಕರು ಬೃಹತ್‌ ಜಾಥಾ ನಡೆಸಿದರು   

ವಿಜಯಪುರ: ವಿಶ್ವ ಕಾರ್ಮಿಕ ದಿನದ ಅಂಗವಾಗಿಜಂಟಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ನಗರದ ಬಾರಾಕಮಾನ್‌ನಿಂದ ಗಗನ್‌ ಮಹಲ್‌ ವರೆಗೆಕಾರ್ಮಿಕರು ಬೃಹತ್‌ ಜಾಥಾ ನಡೆಸಿದರು.

ವಿಶ್ವ ಕಾರ್ಮಿಕ ದಿನ ಯಶಸ್ವಿಯಾಗಲಿ! ಜಗತ್ತಿನ ಕಾರ್ಮಿಕರೇ ಒಂದಾಗಿ! ಕಾರ್ಮಿಕ ವಿರೋಧಿ ಸರ್ಕಾರಗಳಿಗೆ ಧಿಕ್ಕಾರ! ಖಾಸಗೀಕರಣಕ್ಕೆ ಧಿಕ್ಕಾರ! ಕಾರ್ಮಿಕ ವಿರೋಧಿ ನೀತಿಗಳಿಗೆ ಧಿಕ್ಕಾರ! ಎನ್ನುವ ಘೋಷಣೆಗಳು ಕೂಗಿದರು. ನಂತರ ಗಗನ್‌ ಮಹಲ್‌ ಗಾರ್ಡನ್ ಎದುರು ರಸ್ತೆಯ ಮೇಲೆ ಬಹಿರಂಗ ಸಭೆ ಮಾಡಲಾಯಿತು.

ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಯಾದಗಿರಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ರೈಲ್ವೆ, ಭದ್ರತಾ ವಲಯ, ವಿದ್ಯುತ್, ಬ್ಯಾಂಕಿಂಗ್, ಕಲ್ಲಿದ್ದಲು, ಪೆಟ್ರೋಲಿಯಂ, ಉಕ್ಕು, ಬಿ ಎಸ್ ಎನ್ ಎಲ್, ವಿಮಾನ ನಿಲ್ದಾಣ, ವಿವಿಧ ಸಾರಿಗೆ ಸೇರಿದಂತೆಸಾರ್ವಜನಿಕ ವಲಯದ ಮತ್ತು ಸರ್ಕಾರಿ ವಲಯದ ಉದ್ದಿಮೆಗಳ ಖಾಸಗೀಕರಣ ಮಾಡುವ ಮೂಲಕಜನವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.

ADVERTISEMENT

ದೈತ್ಯ ಕಾರ್ಪೊರೇಟ್ ಮನೆತನಗಳ ಪರವಾಗಿ ತಂದ ಕಾರ್ಮಿಕ ವಿರೋಧಿ ಮಸೂದೆಗಳು, ಬೇಕಾದಾಗ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು, ಬೇಡವಾದಾಗ ಕೆಲಸ ದಿಂದ ತೆಗೆದುಹಾಕಲು ಮಾಲೀಕರಿಗೆ ಅಧಿಕಾರ ನೀಡುತ್ತದೆ. ಸೀಮಿತ ಅವಧಿಯ ಉದ್ಯೋಗ ನೀತಿಯಿಂದಾಗಿ ಕಾಯಂ ಉದ್ಯೋಗಗಳು ಮಾಯವಾಗಲಿವೆ. ಕಾರ್ಮಿಕರಿಗೆ ಕನಿಷ್ಠ ಹಕ್ಕುಗಳೇ ಇಲ್ಲದಂತಾಗುತ್ತವೆ ಎಂದರು.

ಮೂರು ಕರಾಳ ಕೃಷಿ ಮಸೂದೆಗಳು ಕೃಷಿಕ್ಷೇತ್ರದ ಕಾರ್ಪೊರೇಟೀಕರಣಕ್ಕೆ ಮುಕ್ತ ಅವಕಾಶ ನೀಡುತ್ತವೆ. ಕೃಷಿ ಉತ್ಪನ್ನಗಳಿಗೆ ಯಾವುದೇ ಕನಿಷ್ಠ ಬೆಂಬಲ ಬೆಲೆಯ ಖಾತ್ರಿ ನೀಡುತ್ತಿಲ್ಲ. ಅಗತ್ಯ ವಸ್ತುಗಳ ಕಾಯ್ದೆಯನ್ನು ದುರ್ಬಲ ಗೊಳಿಸಲಾಗಿದೆ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ,ಬ್ಯಾಂಕ್‌ ಯೂನಿಯನ್ ಮುಖಂಡ ಜಿ.ಜಿ.ಗಾಂಧಿ, ನಿವೃತ್ತ ಬ್ಯಾಂಕ್‌ ಯೂನಿಯನ್ ಮುಖಂಡ ಸಿ.ಎ ಗಂಟೆಪ್ಪಗೋಳ, ಎಸ್‍ಐಎಫ್‍ಟಿ ಕಾರ್ಮಿಕ ಸಂಘದ ಪ್ರಭುಗೌಡ ಪಾಟೀಲ, ಮಲ್ಲಿಕಾರ್ಜುನ್ ಎಚ್.ಟಿ, ರೈತ ಮುಖಂಡರಾದ ಭೀಮಶಿ ಕಲಾದಗಿ, ಪ್ರಕಾಶ್ ಹಿಟ್ಟನಹಳ್ಳಿ, ಅಪ್ಪಾಸಾಬ ಯರನಾಳ ಸುರೇಖಾ ರಜಪೂತ, ಲಕ್ಷ್ಮಣ ಹಂದ್ರಾಳ, ಗೀತಾ ಎಚ್ , ಶಿವರಂಜನಿ, ಬಡ್ಡೆಸಾಬ ಮಮದಾಪುರ, ಸುನಂದಾ ನಾಯಕ, ಸರಸ್ವತಿ ಮಠ, ಶಶಿಕಲಾ ಬಿರಾದಾರ, ಸುಮಂಗಲಾ ಆನಂದಶೆಟ್ಟಿ, ಸುರೇಖಾ ವಾಗ್ಮೋರೆ, ಸಾಬು ಗೂಗದಡ್ಡಿ, ಚಂದ್ರು ವಾಲಿಕಾರ, ಮುಗೇಂದ್ರ ಹುಣಶಾಳ, ಲಾಲಸಾಬ ಕೊರಬು, ರಫೀಕ್‌ ನದಾಫ್‌, ಮುಜಾಹಿದ್ ಅವಟಿ, ಸಾವಿತ್ರಿ ನಾಗರತ್ತಿ, ನಿಗಮ್ಮ ಮಠ, ಮಲ್ಲಿಕಾರ್ಜುನ್ ಹಿರೇಮಠ, ಲಕ್ಷ್ಮಿ ಲಕ್ಷಟ್ಟಿ, ವಿಜಯಲಕ್ಷ್ಮಿ ಹುಣಶಾಳ, ಕಾಸಿಬಾಯಿ ಜನಗೊಂಡ, ಪರಶುರಾಮ ಒಕ್ಕಲದಿನ್ನಿ ಬಸಮ್ಮ ಹಿರೇಮಠ, ಸವಿತಾ ತೇರದಾಳ, ದ್ಯಾಮಣ್ಣ ಬಿರಾದಾರ, ಅಖಂಡೇಶ, ಯಲ್ಲಮ್ಮ ಮೇಟಿ, ಚನ್ನಮ್ಮ, ಹಸನ್‌ ವಾಲಿಕಾರ, ಸಿ.ಎ.ಕುಂಬಾರ, ಸತೀಶ ಮುಕರ್ತಿಹಾಳ ರಮೇಶ ಅಸ್ಕಿ, ಸಂಗಮೇಶ ಯಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.