ಆಲಮೇಲ: ರುಕುಂಪುರ ರಸ್ತೆಯಲ್ಲಾದ ಅತಿಕ್ರಮಣ ತೆರವು ಹಾಗೂ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರದಿಂದ ಆರಂಭಗೊಂಡ ಅನಿರ್ದಿಷ್ಟಾವಧಿ ಸತ್ಯಾಗ್ರಹ ಗುರುವಾರ 2ನೇ ದಿನಕ್ಕೆ ಕಾಲಿಟ್ಟಿತು.
ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಸತ್ಯಾಗ್ರಹ ಟೆಂಟ್‌ನಲ್ಲಿ ಹೋರಾಟಗಾರರು ಧರಣಿ ಕುಳಿತರು.
ಪಟ್ಟಣ ಪಂಚಾಯತಿ ಸದಸ್ಯ ಸಂಜೀವಕುಮಾರ ಯಂಟಮಾನ ತಳವಾರ ಸಮುದಾಯದ ಮುಖಂಡ ಪ್ರಭು ವಾಲಿಕಾರ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಆರ್.ಎಂಟಮಾನ, ಶ್ರೀಶೈಲ ಮಠಪತಿ ಬಸವರಾಜ ತೆಲ್ಲೂರ, ಪಿ.ಟಿ. ಪಾಟೀಲ, ಶಿವು ತಳವಾರ, ಹರೀಶ ಯಂಟಮಾನ, ಶಿವು ಮೇಲೆನಮನಿ, ಬಸು ಹೂಗಾರ ಮೊದಲಾದವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ರಸ್ತೆ ಸರ್ವೆ ಆರಂಭ: ಹೋರಾಟದ ಕಾವು ಹೆಚ್ಚಾಗುತ್ತಿರುವುದು, ಮೇಲಾಧಿಕಾರಿಗಳ ಸಮಾಧಾನಕ್ಕೂ ಒಪ್ಪದ ಹೋರಾಟಗಾರರ ಮನವೊಲಿಸುವ ಕಾರ್ಯ ನಡೆದರೂ ಯಶಸ್ವಿಯಾಗಲಿಲ್ಲ, ರುಕುಂಪುರ ರಸ್ತೆಯನ್ನು ಅಳತೆ ಮಾಡಲು ಸಿಂದಗಿ ತಾಲ್ಲೂಕು ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಸ್.ಅಗಸಬಾಳ ಅವರ ನೇತೃತ್ವದ ಬಳುಂಡಗಿ ಸೂಪರ್ ವೈಸರ್, ಗಂಗರೆಡ್ಡಿ ಭೂಮಾಪಕರು ಒಳಗೊಂಡ ತಂಡ ಸರ್ವೆಕಾರ್ಯ ನಡೆಸಿತು, ರಸ್ತೆಯ ಅಳತೆಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ ಅಗಸಬಾಳ, ಸರ್ವೆ ಕಾರ್ಯ ಪ್ರಗತಿಯಲ್ಲಿದೆ, ದಾಖಲೆಗಳ ಸ್ವರೂಪ ಆಧರಿಸಿ ಭೂಮಾಪನ ನಡೆಸುತ್ತಿದ್ದೇವೆ, ಹೆಚ್ಚಿನ ವಿವರಗಳ ವರದಿ ನೀಡುತ್ತೇವೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.