ನಾಲತವಾಡ: ಪಟ್ಟಣದ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಗಳು ನಡೆಯಲಿ ನಮ್ಮನ್ನು ಕಡೆಗಣಿಸುವ ರೂಢಿ ಇನ್ನೂ ಪಟ್ಟಣದಲ್ಲಿ ಜೀವಂತವಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಮುಖಂಡರು ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ ಅವರಿಗೆ ದೂರಿದರು.
ನಾಲತವಾಡ ಹೊರ ಪೊಲೀಸ್ ಠಾಣೆಯಲ್ಲಿ ನಡೆದ ಎಸ್ಸಿಎಸ್ಟಿ ಕುಂದುಕೊರತೆ ಸಭೆ ಮತ್ತು ಅಸ್ಪೃಶ್ಯತಾ ನಿವಾರಣ ಸಭೆಯಲ್ಲಿ ಆರೋಪಿಸಿದರು.
ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ ಅಹವಾಲು ಸ್ವೀಕರಿಸಿ ಮಾತನಾಡಿ, ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ಎಸ್ಸಿಎಸ್ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯ ಮಲ್ಲು ತಳವಾರ, ಹಣಮಂತ ಚಲವಾದಿ, ಗುಂಡಪ್ಪ ಚಲವಾದಿ, ಭೀಮಣ್ಣ ಚಲವಾದಿ, ಮೌನೇಶ ಮಾದರ, ಮಂಜುನಾಥ ಕಟ್ಟಿಮನಿ, ಮುತ್ತಣ್ಣ ಯರಗೋಡಿ, ಮುತ್ತು ಬೋವಿ, ನಾಗಪ್ಪ ಮಾದರ, ಬಸವರಾಜ ಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.