ADVERTISEMENT

ತಿಕೋಟಾ | ಔಷಧೀಯ ಗುಣವುಳ್ಳ ಸಸ್ಯ ಬೆಳೆಯಲು ಶಾಲಾ ಆವರಣ ಸಜ್ಜು

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 13:52 IST
Last Updated 31 ಜುಲೈ 2023, 13:52 IST
ತಿಕೋಟಾದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಎವಿಎಸ್ ಆಯುರ್ವೇದ ಕಾಲೇಜಿನ ವತಿಯಿಂದ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳು ಸಸಿ ನೆಡುವ ಮೂಲಕ ಶಾಲಾ ಔಷಧ ವನ ನಿರ್ಮಿಸಿದರು. ಈ ಕಾರ್ಯಕ್ರಮಕ್ಕೆ ಗಣ್ಯರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ತಿಕೋಟಾದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಎವಿಎಸ್ ಆಯುರ್ವೇದ ಕಾಲೇಜಿನ ವತಿಯಿಂದ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳು ಸಸಿ ನೆಡುವ ಮೂಲಕ ಶಾಲಾ ಔಷಧ ವನ ನಿರ್ಮಿಸಿದರು. ಈ ಕಾರ್ಯಕ್ರಮಕ್ಕೆ ಗಣ್ಯರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.   

ತಿಕೋಟಾ: ಶಾಲಾ ಮಕ್ಕಳಿಂದ ಔಷಧಿ ಗುಣಗಳುಳ್ಳ ಸಸಿಗಳನ್ನು ನೆಡಿಸುವ ಮೂಲಕ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಪ್ರಾಚಾರ್ಯ ಡಿ. ಕೆ. ಮೋಟೆ ಗಿಡಕ್ಕೆ ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಈ ವರ್ಷ ಸರಕಾರಿ ಶಾಲೆಗಳಲ್ಲಿ ಔಷಧವನ ನಿರ್ಮಾಣ ಮತ್ತು ಪೋಷಣೆ ವಿಶೇಷ ಯೋಜನೆ ಪ್ರಾರಂಭಿಸಿದ್ದು, ಈ ಯೋಜನೆಯಡಿ ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಈ ಯೋಜನೆಯಡಿ ವಿಶ್ವ ಪರಿಸರ ದಿನದ ಅಂಗವಾಗಿ ಮಕ್ಕಳು ಶಾಲೆಯ ಆವರಣದಲ್ಲಿ ಔಷಧಿಯ ಗುಣಗಳುಳ್ಳ ತುಳಸಿ, ಆಡುಸೊಗೆ, ಹೆಬ್ಬೇವು, ಲೋಳಸರ, ಮಧುನಾಶಿನಿ, ಮದಯಂತಿಕಾ, ನುಗ್ಗೆ ಮುಂತಾದ 250 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವೈಜ್ಞಾನಿಕವಾಗಿ ಶಾಲಾ ಔಷಧಿ ವನ ನಿರ್ಮಿಸಿದರು.

ಈ ಮೂಲಕ ಮಂಡಳಿ ಮತ್ತು ಆಯುರ್ವೇದ ಕಾಲೇಜು ಪ್ರಕೃತಿಯ ಮಡಿಲಿನಲ್ಲಿರುವ ಗಿಡಗಳಲ್ಲಿಯ ಜೌಷಧೀಯ ಗುಣಗಳ ಬಗ್ಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಅರಿವು ಮೂಡಿಸಿ ಪರಿಸರದ ಬಗ್ಗೆ ಮತ್ತು ಸದೃಢ ಆರೋಗ್ಯದ ಬಗ್ಗೆ ಗಿಡಮೂಲಿಕೆಗಳ ಸದ್ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದವು.

ADVERTISEMENT

ಈ ಸಂದರ್ಭದಲ್ಲಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಡಿ. ಎನ್. ಧರಿ ಮಾತನಾಡಿ, ಪರಿಸರದ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಹಾಗೂ ಮಕ್ಕಳ ಆರೋಗ್ಯಕ್ಕೆ ಸಸ್ಯ ಸಂಜೀವಿನಿಯಾಗಬಲ್ಲದು ಎಂದು ಹೇಳಿದರು.

ಪ್ರಾಧ್ಯಾಪಕಿ ಡಾ. ಕಸ್ತೂರಿ ಪಾಟೀಲ ಮಾತನಾಡಿ, ಒಂದು ಮರ ನೂರು ವರವಾಗಿ ಸಹಾಯ ಮಾಡುತ್ತದೆ. ಪ್ರತಿಯೊಂದು ಮಕ್ಕಳಿಗೆ ಒಂದೊಂದು ಸಸಿ ಬೆಳೆಸುವ ಜವಾಬ್ದಾರಿ ನೀಡಿ ಅವುಗಳ ಪೋಷಣೆ ಬಗ್ಗೆ ಅರಿವು ಮೂಡಿಸಿದರು.

ಸಹಪ್ರಾಧ್ಯಾಪಕಿ ಡಾ. ವಿದ್ಯಾಲಕ್ಷ್ಮಿ ಪೂಜಾರಿ, ವಿಜ್ಞಾನ ಶಿಕ್ಷಕ ಗೋಟಕಂಡಕಿ, ಎನ್.ಎಸ್.ಎಸ್ ಅಧಿಕಾರಿ ಡಾ. ಆರ್. ಎ. ದೇಶಮುಖ, ಶಿಬಿರಾರ್ಥಿಗಳು, ಕಾಲೇಜಿನ ದ್ರವ್ಯಗುಣ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತಿಕೋಟಾದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಎವಿಎಸ್ ಆಯುರ್ವೇದ ಕಾಲೇಜಿನ ವತಿಯಿಂದ ಮಕ್ಕಳಿಂದ ಶಾಲಾ ಔಷಧಿ ವನ ನಿರ್ಮಾಣ ಅಂಗವಾಗಿ ಸಸಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.