
ಇಂಡಿ: ‘ಜ್ಞಾನದ ಪರಿಮಳ ಸೂಸುವ ಮೂಲಕ ಕಾಯಕ ದೊಡ್ಡದು ಎಂದು ಸಾರಿದವರು ಶರಣ ಹೂಗಾರ ಮಾದಯ್ಯ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಅಗರಖೇಡ ರಸ್ತೆಯಲ್ಲಿರುವ ಶರಣ ಹೂಗಾರ ಮಾದಯ್ಯ ವೃತ್ತವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ‘ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಹೂವು ಪೋಣಿಸಿದ ದಾರದಂತೆ ಬಾಳಬೇಕು. ಸಹನೆ, ತಾಳ್ಮೆ ಎಲ್ಲರಲ್ಲೂ ಇರಬೇಕು ಎಂದು ಸಾರಿದವರು ಹೂಗಾರ ಮಾದಯ್ಯ’ ಎಂದರು.
ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿದರು. ಪ್ರಭುಗೌಡ ಪಾಟೀಲ, ಪ್ರಶಾಂತ ಹೂಗಾರ, ಸಿದ್ದು ಹೂಗಾರ, ಜಟ್ಟೆಪ್ಪ ರವಳಿ, ದೇವೆಂದ್ರ ಕುಂಬಾರ, ಮಹೇಶ ಹೂಗಾರ, ಸೋಮು ಹೂಗಾರ, ಗಂಗಾಧರ ಹೂಗಾರ, ಪ್ರಕಾಶ ಹೂಗಾರ, ಇಲಿಯಾಸ ಬೋರಾಮಣಿ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.