
ಬಸವನಬಾಗೇವಾಡಿ: ಸಮಾಜದ ಅಂಕು-ಡೊಂಕುಗಳನ್ನು ತಮ್ಮ ನೇರನುಡಿ, ವಚನಗಳ ಮೂಲಕ ತಿದ್ದಿ, ಜಾತ್ಯತೀತ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಪ್ರಮುಖ ಪಾತ್ರವಹಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು. ಇಂತಹ ಮಹಾನ್ ಶರಣರ ಆದರ್ಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ವೈ.ಎಸ್. ಸೋಮನಕಟ್ಟಿ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ತಾಲ್ಲೂಕು ಆಡಳಿತ ಹಾಗೂ ಅಂಬಿಗರ ಸಮಾಜದವರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದಲ್ಲಿ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಅಜ್ಞಾನ, ಮೂಢ ನಂಬಿಕೆಯಂತಹ ಹಲವು ವಿಷಯಗಳನ್ನು ಜನರ ಮನಸ್ಸಿನಿಂದ ತೆಗೆಸಿ ಸತ್ಯ ಶುದ್ಧ ಭಾವದಿಂದ ಕಾಯಕ ಮಾಡಿದರೆ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ’ ಎಂಬ ಸಂದೇಶವನ್ನು ಬಸವಾದಿ ಶರಣರು ಸಾರಿದ್ದಾರೆ ಎಂದರು.
ಶ್ರೀಶೈಲ ಹಿರೇಮಠ, ಡಿಎಸ್‌ಎಸ್ ಮುಖಂಡರಾದ ಮಹಾಂತೇಶ ಸಾಸಾಬಾಳ, ತಮ್ಮಣ್ಣ ಕಾನಾಗಡ್ಡಿ, ಮುಖಂಡರಾದ ಪರಶುರಾಮ ಜಮಖಂಡಿ, ಎಸ್.ಎ. ದೇಗಿನಾಳ, ರಾಜು ಮುಳವಾಡ, ಹಣಮಂತ ಕಾಮನಕೇರಿ, ಲಕ್ಷ್ಮಣ ಅಂಬಿಗೇರ, ರಮೇಶ ಇಂಗಳೇಶ್ವರ, ಕಾಂತು ಕೋಲಕಾರ, ರಮೇಶ ಅಂಬಿಗೇರ, ನಿಂಗಪ್ಪ ಕೊಟಾರ್, ಮಲ್ಲಿಕಾರ್ಜುನ ದಿಂಡವಾರ, ಯಲ್ಲಮ್ಮ ಇಂಗಳೇಶ್ವರ, ರೂಪಾ ಅಂಬಿಗರ, ಜಗದೇವಿ ಗೊಡಕಟ್ಟಿ, ಭಾಗ್ಯಶ್ರೀ ಇಂಗಳೇಶ್ವರ, ರೂಪಾ ಕೊಂಡಗೂಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.