ADVERTISEMENT

ನುಲಿಯ ಚಂದಯ್ಯ ಕಾಯಕಕ್ಕೆ ಒತ್ತು ಕೊಟ್ಟಿದ್ದ ಶರಣ: ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 13:04 IST
Last Updated 19 ಆಗಸ್ಟ್ 2024, 13:04 IST
ಬಸವನಬಾಗೇವಾಡಿಯ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಬಸವನಬಾಗೇವಾಡಿಯ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು   

ಪ್ರಜಾವಾಣಿ ವಾರ್ತೆ

ಬಸವನಬಾಗೇವಾಡಿ: ಬಸವಣ್ಣವರ ಕ್ರಾಂತಿಗೆ 12ನೇ ಶತಮಾನದಲ್ಲಿ ಹಲವಾರು ಶರಣರು ಕೈ ಜೋಡಿಸಿದ್ದರು. ಅದರಲ್ಲಿ ನುಲಿಯ ಚಂದಯ್ಯ ಕೂಡ ಪ್ರಮುಖರು. ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ ಚಂದಯ್ಯನವರು ಸರ್ವಕಾಲಕ್ಕೂ ನಮಗೆ ಪ್ರೇರಣೆಯಾಗಿ ನಿಲ್ಲುತ್ತಾರೆ ಎಂದು ತಹಶೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಹೇಳಿದರು.

ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿ, ನುಲಿಯ ಚಂದಯ್ಯನವರು ಸಮಾಜದ ಓರೆ ಕೋರೆಗಳನ್ನು ಮುಚ್ಚು ಮರೆ ಇಲ್ಲದೆ ತಮ್ಮ ವಚನಗಳ ಮೂಲಕ ತಿಳಿಸಿದವರು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ, ಎಂ.ಎಂ.ದಫೇದಾರ, ಸಿ‌.ಡಿ.ಪಿ.ಓ ಕಚೇರಿ ಅಧೀಕ್ಷಕ ಬೋರಮ್ಮ ಬಿರಾದಾರ, ಮುಖಂಡರಾದ ಬಸವರಾಜ ಭಜಂತ್ರಿ, ಸೀತಾರಾಮ ಭಜಂತ್ರಿ, ಸಿದ್ಧರಾಮ ಭಜಂತ್ರಿ ಇದ್ದರು.

ವೀರೇಶ ಗೂಡ್ಲಮನಿ ನಿರೂಪಿಸಿದರು, ಮಂಜುನಾಥ ಹಳ್ಳೂರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.