ADVERTISEMENT

ಸಿಂದಗಿಯಲ್ಲಿ ಭೂಕಂಪನ: ಆತಂಕ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 23:46 IST
Last Updated 19 ಸೆಪ್ಟೆಂಬರ್ 2025, 23:46 IST
<div class="paragraphs"><p>ಭೂಕಂಪ&nbsp;</p></div>

ಭೂಕಂಪ 

   

ಸಿಂದಗಿ (ವಿಜಯಪುರ ಜಿಲ್ಲೆ): ಪಟ್ಟಣದ ವಿವಿಧೆಡೆ ಗುರುವಾರ ರಾತ್ರಿ 10.47ರಿಂದ ನಸುಕಿನ 5ರವರೆಗೆ 4–5 ಬಾರಿ ಭೂಮಿ ಕಂಪಿಸಿದ ಅನುಭವವಾಯಿತು.

ಭೂಮಿಯೊಳಗಿನಿಂದ ಭಾರಿ ಪ್ರಮಾಣದ ಶಬ್ಧ ಕೇಳಿ ಬಂದಿದೆ. ಆತಂಕಗೊಂಡ ಜನರು, ಮನೆಗಳಿಂದ ಹೊರಬಂದಿದ್ದಾರೆ.

ADVERTISEMENT

‘ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ರಿಕ್ಟರ್‌ ಮಾಪಕದಲ್ಲಿ ತೀವ್ರತೆ ದಾಖಲಾಗಿಲ್ಲ. ಆತಂಕಪಡುವ ಸ್ಥಿತಿ ಇಲ್ಲ’ ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.