
ಸಿಂದಗಿ: ಬಳಗಾನೂರ ಗ್ರಾಮದ ಯುವಕ ಕೇದಾರಲಿಂಗ ಕುಂಬಾರ ಜನವರಿ 3 ರಂದು ಗ್ರಾಮದಿಂದ 55 ಕೆ.ಜಿ ತೂಕದ ಗೋದಿ ಹೊತ್ತುಕೊಂಡು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದರು. ಅವರು ಭಾನುವಾರ ಫೆ. 8 ರಂದು ಗ್ರಾಮದಿಂದ 1350 ಕಿ.ಮಿ ದೂರದ ಉತ್ತರಪ್ರದೇಶದ ಪ್ರಯಾಗರಾಜ್ ತ್ರಿವೇಣಿ ಸಂಗಮ ತಲುಪಿದ್ದಾರೆ.
ಸಂಗಮದಲ್ಲಿ ಸ್ನಾನ ಮುಗಿಸಿ ಹೊತ್ತುಕೊಂಡು ಹೋದ ಗೋದಿ ಚೀಲಕ್ಕೆ ಪೂಜೆ ಸಲ್ಲಿಸಿದ್ದಾರೆ. ಅಲ್ಲಿಂದ ಮತ್ತೆ ಅಯೋಧ್ಯೆಯತ್ತ ಪಾದಯಾತ್ರೆ ಬೆಳೆಸಿದ್ದಾರೆ.
ಅವರ ಜೊತೆ ಅದೇ ಗ್ರಾಮದ ಮುಸ್ಲಿಂ ವ್ಯಕ್ತಿ ನೂರಸಾಬ ನಧಾಪ್ ಹಾಗೂ ವಿವೇಕಾನಂದ ಕುಂಬಾರ, ರೇವಣಸಿದ್ದಪ್ಪ ಕೊಪ್ಪ, ಅರವಿಂದ ಪುರದಾಳ ಇದ್ದಾರೆ.
ನಿತ್ಯ 40-50 ಕಿ.ಮಿ ನಡೆದು ವಾಸ್ತವ್ಯ ಮಾಡಿ ಮತ್ತೆ ಪಾದಯಾತ್ರೆ ಬೆಳೆಸುತ್ತಾರೆ. ವಿವೇಕಾನಂದ ಕುಂಬಾರ ಸಹಾಯಕನಾಗಿ ಬೈಕ್ ತೆಗೆದುಕೊಂಡು ಪಾದಯಾತ್ರಿ ಯುವಕನಿಗೆ ನೀರು, ಊಟದ ವ್ಯವಸ್ಥೆ ಮಾಡುತ್ತಾರೆ ಎಂದು ಗ್ರಾಮದ ಅನೀಲ ಸುರಗಿಹಳ್ಳಿ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.