ADVERTISEMENT

ಸೋಲಾಪುರ: 2ನೇ ದಿನವೂ ಮುಂದುವರಿದ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:28 IST
Last Updated 19 ಡಿಸೆಂಬರ್ 2025, 7:28 IST
ಸೋಲಾಪುದಲ್ಲಿ ಕಂದಾಯ ಇಲಾಖೆ ನೌಕರರು ಮುಷ್ಕರ ನಡೆಸಿದರು
ಸೋಲಾಪುದಲ್ಲಿ ಕಂದಾಯ ಇಲಾಖೆ ನೌಕರರು ಮುಷ್ಕರ ನಡೆಸಿದರು   

ಸೋಲಾಪುರ: ರಾಜ್ಯ ಸರ್ಕಾರದ ಕಂದಾಯ ಸಚಿವರ ನೀತಿಗಳ ವಿರುದ್ಧ, ಸೋಮವಾರದಿಂದಲೇ ಕಂದಾಯ ಖಾತೆಯ ಅಧಿಕಾರಿಗಳು ಮತ್ತು ನೌಕರರು ಬೃಹತ್ ಸಂಘರ್ಷ ಆರಂಭಿಸಿದ್ದಾರೆ. ಬುಧವಾರ ಎರಡನೇ ದಿನವೂ ಅಧಿಕಾರಿಗಳು ಮತ್ತು ನೌಕರರು ಸಾಮೂಹಿಕ ರಜೆ ಆಂದೋಲನ ನಡೆಸಿದರು. ಇದರಿಂದ ಸಾರ್ವಜನಿಕರ ಅನೇಕ ಕೆಲಸಗಳು ಸ್ಥಗಿತಗೊಂಡಿವೆ.

ತಹಶೀಲ್ದಾರ್‌, ಮಂಡಳಾಧಿಕಾರಿಗಳು ಹಾಗೂ ತಲಾಟಿಗಳ ವಿರುದ್ಧ ನಡೆದ ಕ್ರಮಗಳ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ, ಸಚಿವ ಚಂದ್ರಶೇಖರ ಬಾವನಕುಳೆ ಅವರು ನೇರವಾಗಿ ತಹಶೀಲ್ದಾರ್‌, ಮಂಡಳಾಧಿಕಾರಿಗಳು ಹಾಗೂ ತಲಾಟಿಗಳ ವಿರುದ್ಧ ಕ್ರಮ ಕೈಗೊಂಡಿದ್ದರು. ಆದರೆ ಈ ಕ್ರಮದ ವಿರುದ್ಧ ಅಧಿಕಾರಿಗಳು ಮತ್ತು ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಲಾಪುರ ತಹಶೀಲ್ದಾರ್‌, ಮಂಡಳಾಧಿಕಾರಿಗಳು ಹಾಗೂ ತಲಾಟಿಗಳ ವಿರುದ್ಧ ನಡೆದ ಕ್ರಮವನ್ನು ಹಿಂಪಡೆಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು, ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ನೌಕರರು ಆಂದೋಲನ ನಡೆಸಿದರು. ತಲಾಟಿಗಳ ವಿರುದ್ಧ ತೆಗೆದುಕೊಂಡ ಅಮಾನತು ಕ್ರಮವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳು ಮತ್ತು ನೌಕರರು ಕೆಲಸ ನಿಲ್ಲಿಸಿ ಆಂದೋಲನ ಆರಂಭಿಸಿದ್ದಾರೆ.

ADVERTISEMENT

ಈ ಆಂದೋಲನದ ಪರಿಣಾಮವಾಗಿ ಲಾಡಕಿ ಬಹಿಣ್ ಯೋಜನೆ, ಈ-ಕೆವೈಸಿ, ನೈಸರ್ಗಿಕ ಆಪತ್ತು ಪರಿಹಾರ, ಪಿಎಂ ಕಿಸಾನ್ ಯೋಜನೆ, ಎಲ್ಲಾ ವಿಧದ ದಾಖಲೆಗಳು, ಮತದಾರ ನೋಂದಣಿ, ವರ್ಗಾವಣೆ, ರಾಜಶಿಷ್ಟಾಚಾರ, ವಿವಿಧ ಆಯೋಗಗಳ ಮೂಲಕ ನಡೆಯುವ ಸಂಜಯ ಗಾಂಧಿ ಯೋಜನೆ ಸೇರಿದಂತೆ ಕಂದಾಯ ಇಲಾಖೆಯ ಅನೇಕ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.