
ಹೊರ್ತಿ: ‘ದೇವರ ನಾಮಜಪದಿಂದ ಮೋಕ್ಷ ಪ್ರಾಪ್ತಿ ಆಗಲಿದೆ’ ಎಂದು ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹೊರ್ತಿಯ ಸುಕ್ಷೇತ್ರ ರೇವಣಸಿದ್ಧೇಶ್ವರ ದೇವಾಲಯದಲ್ಲಿ ಮಂಗಳವಾರ ನಡೆದ ಮಹಾಶಿವಾರಾತ್ರಿ ಉತ್ಸವದ ಅಂಗವಾಗಿ ನಡೆದ 4ನೇ ವರ್ಷದ ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
‘ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಬಹಳ ಮಹತ್ವವಿದೆ. ಸಾಧನೆಯ ದಾರಿಯಲ್ಲಿ ಗುರುವಿನ ಉಪದೇಶ ಮಂತ್ರಗಳು ಬದುಕಿಗೆ ದಾರಿದೀಪವಾಗಿವೆ’ ಎಂದರು.
‘ಅಮೃತಾನಂದ ಶ್ರೀ ಆಶೀರ್ವಚನ ನೀಡಿ, ‘ಸಕಲ ವಸ್ತುಗಳಲ್ಲಿ ಭಗವಂತನ ವಾಸವನ್ನು ನಾವು ಗುರುತಿಸಿಕೊಳ್ಳಬೇಕು. ಸಕಲ ಪ್ರಾಣಿಗಳಲ್ಲಿ ದಯೆ ತೋರಬೇಕು’ ಎಂದು ಹೇಳಿದರು.
ತಡವಲಗಾ ಶ್ರೀ, ರಾಚೋಟೋಶ್ವರ ಶಿವಾಚಾರ್ಯ ಶ್ರೀ ಆಶೀರ್ವಚನ ನೀಡಿ, 'ಹೊರ್ತಿ ರೇವಣಸಿದ್ಧೇಶ್ವದ ಕ್ಷೇತ್ರವೂ ಮುಂಬರುವ ದಿನಗಳಲ್ಲಿ ವಿಶ್ವಪ್ರಸಿದ್ಧ ಕ್ಷೇತ್ರವಾಗಿ ಬೆಳೆಯುತ್ತದೆ’ ಎಂದರು.
‘ಮನುಷ್ಯನ ದೇಹ ಮತ್ತು ಮನಸ್ಸು ಶುದ್ಧಿಗೊಳಿಸಲು ಭಗವಂತನ ಚಿಂತನೆ ಮತ್ತು ಆಧ್ಯಾತ್ಮಿಕ ದಾರಿಯಲ್ಲಿ ಸಾಗಬೇಕು’ ಎಂದು ಬೊಮ್ಮನಹಳ್ಳಿ ಗುರುಶಾಂತ ಶಿವಾಚಾರ್ಯರ ಆಶೀವರ್ಚನ ನೀಡಿದರು.
ಹೊರ್ತಿಯ ರೇವಣಸಿದ್ಧೇಶ್ವರ ದೇವಾಲಯ ಅಧ್ಯಕ್ಷ ಅಣ್ಣಪ್ಪ ಶಿ. ಖೈನೂರ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ಮುನ್ನ ಶಿವಯ್ಯ ಸ್ವಾಮಿ ಹಿರೇಮಠ ಅವರು ಕೋಟಿ ಜಪಯಜ್ಞ ಶಿವ ಪಂಚಾಕ್ಷರಿ ಮಂತ್ರ ಪಠಣ ಭೋದಿಸಿದರು.
ರೇವಣಸಿದ್ಧೇಶ್ವವರ ದೇವಸ್ಥಾನ ಸಂಸ್ಥೆಯ ಅಧ್ಯಕ್ಷ ಎ.ಎಸ್. ಖೈನೂರ ಅಧ್ಯಕ್ಷತೆ ವಹಿಸಿದ್ದರು, ನಿರ್ದೇಶಕ ಜೆ.ಎಸ್.ಪೂಜಾರಿ, ಶ್ರೀಮಂತ ಇಂಡಿ, ಅಣ್ಣಪ್ಪಗೌಡ ಪಾಟೀಲ, ಗುರಪ್ಪ ಪೂಜಾರಿ, ರೇವಣಸಿದ್ಧ ಪೂಜಾರಿ, ಶಿವಾನಂದ ಮೇತ್ರಿ, ಬಸವರಾಜ ವಿ.ಪತ್ತಾರ, ಬಸವರಾಜ ಜಂಬಗಿ, ಎಂ.ಎಂ.ಬಬಲಾದ, ಎಸ್.ಎಸ್.ಪೂಜಾರಿ ಸೇರಿದಂತೆ 5ಸಾವಿರಕ್ಕೂ ಹೆಚ್ಚು ಭಕ್ತರು 4ನೇ ವರ್ಷದ ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.