ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಸಮರ್ಥ ತಾಲ್ಲೂಕಿಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 14 ಮೇ 2025, 11:24 IST
Last Updated 14 ಮೇ 2025, 11:24 IST
ಸಮರ್ಥ ಕುಂಬಾರ
ಸಮರ್ಥ ಕುಂಬಾರ   

ಸಿಂದಗಿ: ಪಟ್ಟಣದ ಲೊಯೋಲ ಶಾಲೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ (ಸಿಬಿಎಸ್ಇ) ಶೇ 100 ರಷ್ಟು ಉತ್ತಮ ಫಲಿತಾಂಶ ದಾಖಲಿಸಿದೆ.

45 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಮೂವರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಮರ್ಥ ಕುಂಬಾರ ಶೇ 95 ರಷ್ಟು ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ, ಜಿಲ್ಲೆಗೆ 8ನೇ ಸ್ಥಾನದಲ್ಲಿದ್ದಾರೆ. ಗಣೇಶ ಪಿ. ಶೆಟ್ಟಿ ಶೇ 92.4, ನಿತಿನ್ ಶೇರಖಾನೆ (91.4, ರಕ್ಷಿತಾ ನಾಗಾವಿ ಶೇ 90.8, ಕೀರ್ತಿ ಪತ್ತಾರ ಶೇ 89.6, ಶಿವಲಿಂಗ ಹಚಡದ ಶೇ 88.4, ವಿಜಯಲಕ್ಷ್ಮೀ ಪಡೇಕನೂರ ಶೇ 88, ಹಿರಣ್ಯ ಕತ್ತಿ ಶೇ 87.2, ಸಿದ್ದಾರ್ಥ ಬಗಲಿ ಶೇ87.2, ಸರ್ವೇಶ್ವರಿ ಶೇ 85.6, ಸ್ಪೂರ್ತಿ ಬಿರಾದಾರ ಶೇ 85.2,  ಸಾಹೇಬಗೌಡ ಪಾಟೀಲ ಶೇ 85 ರಷ್ಟು ಅಂಕ ಗಳಿಸಿದ್ದಾರೆ.

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಶಾಲೆ ಪ್ರಾಚಾರ್ಯರು, ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಗಣೇಶ ಶೆಟ್ಟಿ
ನಿತಿನ್ ಶೇರಖಾನೆ
ರಕ್ಷಿತಾ ನಾಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.