ADVERTISEMENT

ದೇವರಹಿಪ್ಪರಗಿ: ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:08 IST
Last Updated 8 ಡಿಸೆಂಬರ್ 2025, 5:08 IST
ದೇವರಹಿಪ್ಪರಗಿ ಪಟ್ಟಣದಲ್ಲಿ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಹಾಗೂ ಲಸಿಕೆ ನೀಡಲು ಪಟ್ಟಣ ಪಂಚಾಯಿತಿಯಿಂದ ವಿಶೇಷ ತಂಡ ರಚಿಸಿ ಎಬಿಸಿ ಕೇಂದ್ರಗಳಿಗೆ ಸಾಗಿಸಲಾಯಿತು
ದೇವರಹಿಪ್ಪರಗಿ ಪಟ್ಟಣದಲ್ಲಿ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಹಾಗೂ ಲಸಿಕೆ ನೀಡಲು ಪಟ್ಟಣ ಪಂಚಾಯಿತಿಯಿಂದ ವಿಶೇಷ ತಂಡ ರಚಿಸಿ ಎಬಿಸಿ ಕೇಂದ್ರಗಳಿಗೆ ಸಾಗಿಸಲಾಯಿತು   

ದೇವರಹಿಪ್ಪರಗಿ: ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಶಕ್ತಿಹರಣ ಚಿಕಿತ್ಸೆ ಹಾಗೂ ಲಸಿಕೆ ನೀಡಲು ಪಟ್ಟಣ ಪಂಚಾಯಿತಿಯಿಂದ ವಿಶೇಷ ತಂಡ ರಚಿಸಿ ಎಬಿಸಿ ಕೇಂದ್ರಗಳಿಗೆ ಸಾಗಿಸಲಾಯಿತು.

ರಾಜ್ಯದಲ್ಲಿ ಸಾರ್ವಜನಿಕರು ಹಾಗೂ ಮಕ್ಕಳ ಮೇಲಿನ ನಾಯಿಗಳ ದಾಳಿ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕಳೆದ ಮೂರು ದಿನಗಳಿಂದ ಪಟ್ಟಣ ಪಂಚಾಯಿತಿ ವಿಶೇಷ ಕಾರ್ಯಾಚರಣೆ ಕೈಗೊಂಡು 50 ಕೂ ಹೆಚ್ಚು ನಾಯಿಗಳನ್ನು ಸೆರೆಹಿಡಿಯಲಾಯಿತು.

‘ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶನ ಹಾಗೂ ಪ್ರಾಣಿ ನಿಯಂತ್ರಣ ಮಂಡಳಿ ನಿಯಮಗಳು 2023ರ ಅನ್ವಯ ಬೀದಿ ನಾಯಿಗಳ ನಿರ್ವಹಣೆಗಾಗಿ ಈ ಕಾರ್ಯಚರಣೆ ಕೈಗೊಳ್ಳಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆಫ್ರೋಜ ಅಹ್ಮದ ಪಟೇಲ ಮಾಹಿತಿ ನೀಡಿದರು.

ADVERTISEMENT

‘ಉತ್ತರಪ್ರದೇಶದ ತರಬೇತಿ ಪಡೆದ ತಂಡಗಳು ಜನನಿಬಿಡ ಪ್ರದೇಶದ ಶ್ವಾನಗಳನ್ನು ಹಿಡಿದು ಎ.ಬಿ.ಸಿ ಕೇಂದ್ರಕ್ಕೆ ಸಾಗಿಸಿ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಹಾಗೂ ರೇಬಿಸ್‌ ನಿರೋಧಕ ಲಸಿಕೆ ನೀಡಿ ಮೂರು ದಿನಗಳವರೆಗೆ ಆರೈಕೆ ಮಾಡುತ್ತಾರೆ. ಈ ಪ್ರಕ್ರಿಯೆ ಮುಗಿದು ಚೇತರಿಸಿಕೊಂಡ ನಾಯಿಗಳಿಗೆ ಗುರುತನ್ನು ಮಾಡಿ ಮರಳಿ ಬಿಡಲಾಗುತ್ತದೆ. ಈ ಕಾರ್ಯಾಚರಣೆ ಏಳು ದಿನಗಳವರೆಗೆ ನಡೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.