ADVERTISEMENT

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ 

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 15:30 IST
Last Updated 16 ಸೆಪ್ಟೆಂಬರ್ 2024, 15:30 IST
ಬಾಲವ್ವ ಕಮರಿ
ಬಾಲವ್ವ ಕಮರಿ   

ಪ್ರಜಾವಾಣಿ ವಾರ್ತೆ

ಮುದ್ದೇಬಿಹಾಳ : ಇಲ್ಲಿನ ಕೃಷ್ಣ ನದಿಯಲ್ಲಿ ಮುಳುಗಿ ಬಾಲವ್ವ ಆರ್.ಕಮರಿ ಎಂಬ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರ ಶವ ಪತ್ತೆಯಾಗಿದೆ.

‘ಇಳಕಲ್ ತಾಲ್ಲೂಕಿನ ಚಟ್ನಿಹಾಳ ಗ್ರಾಮದ ಬಾಲವ್ವ ಆರ್.ಕಮರಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದರು. ಎರಡು ದಿನಗಳ ಹಿಂದೆ ನದಿಗೆ ಜಿಗಿದಿದ್ದರು. ಅಗ್ನಿಶಾಮಕ ದಳದ ಸಹಯೋಗದೊಂದಿಗೆ ಶವವನ್ನು ಹೊರತೆಗೆಯಲಾಯಿತು. ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪೋಷಕರು ಹೇಳಿದ್ದಾರೆ’ ಎಂದು ಮುದ್ದೇಬಿಹಾಳ ಠಾಣೆಯ ಪಿಎಸ್‌ಐ ಸಂಜಯ ತಿಪರೆಡ್ಡಿ ತಿಳಿಸಿದ್ದಾರೆ.

ADVERTISEMENT
ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದ ಚಟ್ನಿಹಾಳ ಗ್ರಾಮದ ಬಾಲವ್ವ ಕಮರಿ ಶವಕ್ಕೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.