ADVERTISEMENT

ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹ: ಇಂಡಿ ಬಂದ್‌ ಸಂಪೂರ್ಣ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:09 IST
Last Updated 8 ನವೆಂಬರ್ 2025, 5:09 IST
ಕಬ್ಬಿಗೆ ₹3,500 ದರ ನಿಗದಿಪಡಿಸವಂತೆ ಒತ್ತಾಯಿಸಿ ಶುಕ್ರವಾರ ಇಂಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಅದೃಷ್ಯಪ್ಪಾ ವಾಲಿ ಬಾರಿಕೋಲಿನಿಂದ ಹೊಡೆದುಕೊಂಡರು  
ಕಬ್ಬಿಗೆ ₹3,500 ದರ ನಿಗದಿಪಡಿಸವಂತೆ ಒತ್ತಾಯಿಸಿ ಶುಕ್ರವಾರ ಇಂಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಅದೃಷ್ಯಪ್ಪಾ ವಾಲಿ ಬಾರಿಕೋಲಿನಿಂದ ಹೊಡೆದುಕೊಂಡರು     

ಇಂಡಿ: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಶುಕ್ರವಾರ ಕರೆ ನೀಡಿದ ಇಂಡಿ ಬಂದ್‌ ಸಂಪೂರ್ಣ ಯಶಸ್ವಿಯಾಯಿತು. 

ಕೃಷಿ ಮಾರುಕಟ್ಟೆ, ವರ್ತಕರ ಸಂಘ, ಪಟ್ಟಣದ ವಿವಿಧ ವ್ಯಾಪಾರಸ್ಥರು ಬಂದಲ್ಲಿ ಸ್ವಯಂ ಪ್ರೇರಿತ ಅಂಗಡಿಗಳನ್ನು ಬಂದ್ ಮಾಡಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬಸ್‌ ಸಂಚಾರ ವಿರಳವಾಗಿತ್ತು. ಬಂದ್‌ ನಿಂದಾಗಿ ಬೇರೆ ಊರುಗಳಿಂದ ಪ್ರಯಾಣಿಕರಿಗೆ ತೊಂದರೆಯಾಯಿತು. 

ಬಸವೇಶ್ವರ ವೃತ್ತದಲ್ಲಿ ನಡೆದ ಸಭೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಕಂಬೋಗಿ, ಮಾಜಿ ಶಾಸಕ ರವಿಕಾಂತ ಪಾಟೀಲ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಜೆಡಿಎಸ್ ಪಕ್ಷದ ಮುಖಂಡ ಬಿ.ಡಿ .ಪಾಟೀಲ, ವೈದ್ಯ ಅನೀಲ ವಾಲಿ, ಎಸ್.ಎಂ.ಕೋಳಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತಗೌಡ ಪಾಟೀಲ, ದಯಾಸಾಗರ ಪಾಟೀಲ, ಗುಂದವಾನ ಪಟೇಲ , ಶೀಲವಂತ ಉಮರಾಣಿ, ಅನೀಲಗೌಡ ಜಮಾದಾರ ಮುಂತಾದವರು ಮಾತನಾಡಿ, ರೈತರ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು ಎಚ್ಚರಿಕೆ ನೀಡಿದರು.

ADVERTISEMENT

ಐದನೇ ದಿನದ ಹೋರಾಟದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಬೋಗಿ, ಬಾಳು ಮುಳಜಿ, ಮಲ್ಲು ಗುಡ್ಲ, ಮಲ್ಲಿಕಾರ್ಜುನ ಕಿವಡೆ, ದೇವೆಂದ್ರ ಕುಂಬಾರ, ಕೆಆರ್ ಎಸ್ ಪಕ್ಷದ ಅಶೋಕ ಜಾಧವ, ರೇವಣ್ಣ ಹತ್ತಳ್ಳಿ, ಅನೀಲಗೌಡ ಬಿರಾದಾರ, ಅದೃಷಪ್ಪ ವಾಲಿ, ವೈದ್ಯರಾದ ಎಂ.ಎಚ್. ಅಂಕಲಗಿ ರಮೇಶ ಪೂಜಾರಿ, ಪರಮಾನಂದ ಬಿರಾದಾರ, ಶಿವರಾಜ ಕೊಪ್ಪ, ರಾಜು ತೋಳನೂರ, ಮುಖಂಡರಾದ ಕುಮಾರಗೌಡ ಪಾಟೀಲ ಇದ್ದರು.

ರೈತ ಮೈ ಮೇಲೆ ರೂ 3500 ಬರೆದುಕೊಂಡು ಪ್ರದರ್ಶನ ಗಮನ ಸೆಳೆದರು.  

ಇಂಡಿಯಲ್ಲಿ ಶುಕ್ರವಾರ  ನಡೆದ ಬಂದ ದಲ್ಲಿ ಪಾಲ್ಗೊಂಡ ರೈತ ಸಮೂಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.