ADVERTISEMENT

ವಿಜಯಪುರ: ನೆರೆ ಪೀಡಿತ ಪ್ರದೇಶಕ್ಕೆ ಸುನೀಲ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 14:32 IST
Last Updated 12 ಅಕ್ಟೋಬರ್ 2020, 14:32 IST
ಬಬಲೇಶ್ವರ ತಾಲ್ಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು
ಬಬಲೇಶ್ವರ ತಾಲ್ಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು   

ವಿಜಯಪುರ: ಡೋಣಿ ನದಿಯ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಭೇಟಿ ನೀಡಿ, ಸುರಕ್ಷಾ ಕ್ರಮಗಳನ್ನು ಹಾಗೂ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಬಲೇಶ್ವರ ತಾಲ್ಲೂಕಿನ ದಾಶ್ಯಾಳ, ಕೊಟ್ಯಾಳ ಮತ್ತು ಸಾರವಾಡ ಗ್ರಾಮಗಳಿಗೆ ಭೇಟಿ ನೀಡಿ, ನೆರೆ ಹಾವಳಿಯಿಂದ ಸಿಲುಕಿದ ಪ್ರದೇಶಗಳಲ್ಲಿ ವಸ್ತುಸ್ಥಿತಿ ಅವಲೋಕಿಸಿದರು.

ಈ ಹಿಂದೆ ಕೂಡ ಈ ಗ್ರಾಮಸ್ಥರು ಭೀಕರ ಪ್ರವಾಹದಲ್ಲಿ ಸಿಲುಕಿದ್ದಾರೆ. ಈಗ ಕೊರೊನಾ ಕಾಯಿಲೆ ಕೂಡ ಸಮಸ್ಯೆ ಉಂಟುಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನೆರೆಹಾವಳಿ ಎದುರಾದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಅದಕ್ಕೆ ಹಾನಿ ಉಂಟಾಗಿರುವ ಪ್ರದೇಶವನ್ನು ಕೂಡಲೇ ಸಮೀಕ್ಷೆ ಮಾಡಿ, ಯಾರೊಬ್ಬರಿಗೂ ಅನ್ಯಾಯವಾಗದಂತೆ ಸೂಕ್ತ ಫಲಾನುಭವಿಗೆ ಪರಿಹಾರ ದೊರಕುವಂತೆ ನೋಡಿಕೊಳ್ಳಿ ಎಂದರು.

ADVERTISEMENT

ತಿಕೋಟಾ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಠೋಡ, ಬಬಲೇಶ್ವರ ತಹಶೀಲ್ದಾರ್‌ ಮಲ್ಲಿಕಾರ್ಜುನ ಅರಕೇರಿ, ಬಬಲೇಶ್ವರ ಕಂದಾಯ ನೀರಿಕ್ಷಕ ಸುಧೀಂದ್ರ ಗುಮಾಸ್ತೆ, ಗ್ರಾಮ ಲೆಕ್ಕಾಧಿಕಾರಿಗಳಾದ ವಿನಯ ಕುಲಕರ್ಣಿ, ರವಿಪ್ರಕಾಶ ಕಾಂಬಳೆ ಸೇರಿದಂತೆ ಮುಖಂಡರಾದ ಪ್ರಮೋದ ಚಿಕರೆಡ್ಡಿ, ಜಗ್ಗುಗೌಡ ಪಾಟೀಲ, ಗುರಪ್ಪ ನಾಕೆತ್ತಿನವರ, ರಾಜು ಸುಣಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.