ADVERTISEMENT

ತಾಳಿಕೋಟೆ: ಶಾಂತವೀರ ಶಿವಯೋಗಿ ಶಿವಾಚಾರ್ಯರ ನಿಧನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 17:50 IST
Last Updated 15 ಜನವರಿ 2026, 17:50 IST
ಸಂಸ್ಥಾನ ಹಿರೇಮಠದ ಪೀಠಾಧಿಪತಿ.
ಸಂಸ್ಥಾನ ಹಿರೇಮಠದ ಪೀಠಾಧಿಪತಿ.   

ತಾಳಿಕೋಟೆ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಹಿರೂರು ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ 35ನೇ ಪೀಠಾಧಿಪತಿ ಶಾಂತವೀರ ಶಿವಯೋಗಿ ಶಿವಾಚಾರ್ಯರು ಗುರುವಾರ ನಿಧನರಾದರು. ಶ್ರೀಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಶ್ರೀಮಠ ತಿಳಿಸಿದೆ.

1925ರಲ್ಲಿ ಹುನಗುಂದ ತಾಲ್ಲೂಕಿನ ವೀರಾಪುರದಲ್ಲಿ ಜನಿಸಿದ ಶ್ರೀಗಳು, 1945ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದರು. 1948ರಲ್ಲಿ ಹಿರೂರು ಮಠದ ಪೀಠಾಧ್ಯಕ್ಷರಾದರು. 331 ಮಠಗಳ ನೇರ ಉಸ್ತುವಾರಿ ಶ್ರೀಮಠದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT