ADVERTISEMENT

ದೇವರಹಿಪ್ಪರಗಿ: ₹15 ಲಕ್ಷ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 13:42 IST
Last Updated 9 ಮಾರ್ಚ್ 2024, 13:42 IST
ದೇವರಹಿಪ್ಪರಗಿ ಪಟ್ಟಣದ ಇಂಡಿ ರಸ್ತೆಯ ಹೆಸ್ಕಾಂ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಹನುಮಾನ ಮಂದಿರದ ಭೂಮಿಪೂಜೆಯನ್ನು ಎಇಇ ಗಂಗಾಧರ ಲೋಣಿ ನೆರವೇರಿಸಿದರು
ದೇವರಹಿಪ್ಪರಗಿ ಪಟ್ಟಣದ ಇಂಡಿ ರಸ್ತೆಯ ಹೆಸ್ಕಾಂ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಹನುಮಾನ ಮಂದಿರದ ಭೂಮಿಪೂಜೆಯನ್ನು ಎಇಇ ಗಂಗಾಧರ ಲೋಣಿ ನೆರವೇರಿಸಿದರು   

ದೇವರಹಿಪ್ಪರಗಿ: ಪಟ್ಟಣದ ಇಂಡಿ ರಸ್ತೆಯ ಹೆಸ್ಕಾಂ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಹನುಮಾನ ದೇವಸ್ಥಾನದ ಭೂಮಿಪೂಜೆಯನ್ನು ಎಇಇ ಗಂಗಾಧರ ಲೋಣಿ ಶುಕ್ರವಾರ ನೆರವೇರಿಸಿದರು.

ಮೇಲ್ವಿಚಾರಕ ಶಿವಾನಂದ ಕೊಡಗೆ ಮಾತನಾಡಿ, ‘ಹೆಸ್ಕಾಂ ಆವರಣದಲ್ಲಿ ಈಗೀರುವ ಹನುಮಾನ ದೇವಸ್ಥಾನ ಕಟ್ಟಡ ಹಳೆಯದ್ದಾಗಿದ್ದು, ಚಿಕ್ಕದಾಗಿದೆ. ಈಗ ₹15 ಲಕ್ಷ ವೆಚ್ಚದಲ್ಲಿ ನೂತನ ಹನುಮಾನ ದೇವಸ್ಥಾನ ನಿರ್ಮಿಸಲು ಹೆಸ್ಕಾಂ ಸಿಬ್ಬಂದಿ ಯೋಜನೆ ರೂಪಿಸಿದ್ದಾರೆ. 2025ರ ಹನುಮಾನ ಜಯಂತಿಯಂದು ದೇವಸ್ಥಾನ ಪೂರ್ಣಗೊಳ್ಳಲಿದೆ’ ಎಂದರು.

ಶಾಖಾಧಿಕಾರಿ ಅಶೋಕ ಕಂದಗಲ್ಲ, ಗುತ್ತಿಗೆದಾರರಾದ ವಸಂತ ನಾಡಗೌಡ, ಸಿದ್ದು ಪಾಟೀಲ, ಕಾಶೀನಾಥ ಹಿರೇಮಠ, ಸಿಬ್ಬಂದಿ ಚಿದಾನಂದ ಸುರಪೂರ, ದೇವೇಂದ್ರ ಯಾಳಗಿ, ಸದಾಶಿವ ನಿಂಗಪ್ಪ, ಅಶೋಕ ಫಿರಂಗಿ ಸೇರಿದಂತೆ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.