ಸಿಂದಗಿ: ಪಟ್ಟಣದಲ್ಲಿ ಮೇ 20 ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಸೇತುವೆಯಲ್ಲಿ ಚರಂಡಿ ನೀರು ತುಂಬಿಕೊಂಡು ಹತ್ತಿರದ ಮನೆಗಳಲ್ಲಿ, ಪುರಸಭೆ ಕಾರ್ಯಾಲಯದ ಮುಖ್ಯದ್ವಾರದಲ್ಲಿ ನೀರು ನುಗ್ಗಿತ್ತು. ಸೇತುವೆಯನ್ನು ಏಕಾಏಕಿ ಒಡೆದು ಹಾಕಿದ್ದರಿಂದ ಮುಖ್ಯರಸ್ತೆ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆಯಾಗಿತ್ತು.
27 ದಿನಗಳ ಬಳಿಕ ಎಚ್ಚೆತ್ತುಕೊಂಡಿರುವ ಪುರಸಭೆ ಅಧಿಕಾರಿಗಳು ಚರಂಡಿ ನೀರು ಹರಿದು ಹೋಗುವುದಕ್ಕೆ ತಾತ್ಕಾಲಿಕ ಕಾಮಗಾರಿ ಆರಂಭಿಸಲಾಯಿತು.
ನೀರು ಹರಿದು ಹೋಗಲು ದೊಡ್ಡ ಗಾತ್ರದ ಸಿಮೆಂಟ್ ಪೈಪ್ ಗಳನ್ನು ಹಾಕಲಾಗಿದೆ. ಇನ್ನೂ ಗರಸು ಹಾಕಿ ಸ್ಥಗಿತಗೊಂಡಿದ್ದ ರಸ್ತೆ ಸುಗಮ ಸಂಚಾರ ಪ್ರಾರಂಭಗೊಳ್ಳಬೇಕಿದೆ. ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಸ್ಥಳದಲ್ಲಿದ್ದುಕೊಂಡು ಕಾಮಗಾರಿ ಪರಿಶೀಲಿಸಿದರು. ಪುರಸಭೆ ಮುಖ್ಯಾಧಿಕಾರಿ ರಾಜಶೇಖರ ಎಸ್. ಹಾಜರಿದ್ದರು.
ಈ ಅವ್ಯವಸ್ಥೆಯ ಕುರಿತು ’ಪ್ರಜಾವಾಣಿ’ ಜೂನ್ 9ರ ಸಂಚಿಕೆಯಲ್ಲಿ 'ಸಿಂದಗಿ: ರಸ್ತೆ ಮೇಲೆ ಕೊಳಚೆ ನೀರು' ಶೀರ್ಷಿಕೆಯ ವರದಿ ಪ್ರಕಟಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.