ADVERTISEMENT

ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ: ಡಿಸಿ

ಪೌರ ಕಾರ್ಮಿಕರಿಗೆ ಪಾಲಿಕೆಯಿಂದ ಸನ್ಮಾನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 14:37 IST
Last Updated 23 ಸೆಪ್ಟೆಂಬರ್ 2022, 14:37 IST
ವಿಜಯಪುರ ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ
ವಿಜಯಪುರ ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ   

ವಿಜಯಪುರ:ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದಗರದ ಕಂದಗಲ್ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದಪೌರ ಕಾರ್ಮಿಕರ ದಿನಾಚರಣೆಯಲ್ಲಿಪೌರ ಕಾರ್ಮಿಕರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ, ಸ್ವಾತಂತ್ರ್ಯ ಹೋರಾಟದಷ್ಟೇನೈರ್ಮಲ್ಯದ ಬಗೆಗಿನ ಹೋರಾಟವೂ ಮಹತ್ವದ್ದಾಗಿದೆ ಎನ್ನುವ ಗಾಂಧೀಜಿಯವರ ವಿಚಾರಧಾರೆಯು ಸ್ವಚ್ಛತೆಯ ಮಹತ್ವವನ್ನು ತಿಳಿಸುತ್ತದೆ. ಸ್ವಚ್ಚತೆ ಇಲ್ಲದಿದ್ದರೆ ಯಾವ ರಾಷ್ಟ್ರವೂ ಮುಂದೆ ಬರಲು ಸಾಧ್ಯವಿಲ್ಲ. ಹೀಗಾಗಿವೈಯಕ್ತಿಕ ಮತ್ತು ಪರಿಸರ ಸ್ವಚ್ಚತೆಯತ್ತ ಪ್ರತಿಯೊಬ್ಬರು ಗಮನ ಹರಿಸಬೇಕು ತಿಳಿಸಿದರು.

ಜಿಲ್ಲೆಯು ಪ್ರವಾಸಿ ತಾಣವಾಗಿದೆ. ಇಂತಹ ನಗರದ ಶುಚಿತ್ವಕ್ಕೆ ಶ್ರಮಿಸುವ ಎಲ್ಲ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯವಾದುದು ಎಂದರು.‌

ADVERTISEMENT

ಪೌರ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿಸುವ ವಿಷಯದಲ್ಲಿ, ಬೆಳಗಿನ ಉಪಹಾರಕ್ಕೆ ₹ 35 ನೀಡುವಲ್ಲಿ ಮತ್ತು ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ‌ ವಿಷಯದಲ್ಲಿ ಉತ್ತಮ ಕಾರ್ಯ ಮಾಡಿ ಇಡೀ ರಾಜ್ಯದಲ್ಲೇ ವಿಜಯಪುರ ಮಹಾನಗರ ಪಾಲಿಕೆಯು ಉತ್ತಮ ಸ್ಥಳೀಯ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

ಮನೆಯಿಲ್ಲದ ಪೌರ ಕಾರ್ಮಿಕರಿಗೆ ಮನೆಕೊಡುವ ಕಾರ್ಯದ ಜೊತೆಗೆ ನೇರ ನೇಮಕಾತಿ ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರಿಗು ಸಹ ಮನೆಗಳನ್ನು ಕೊಡುವ ಕಾರ್ಯವನ್ನು ಪಾಲಿಕೆಯ ಮಾಡುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಾರ್ಯದಷ್ಟೇ ಪೌರ ಕಾರ್ಮಿಕರ ಕಾರ್ಯ ಸಹ ಅಷ್ಟೇ ಮುಖ್ಯವಾಗಿದೆ. ಯಾವ ಕೆಲಸವೂ ಚಿಕ್ಕದಲ್ಲ, ಪ್ರತಿಯೊಂದು ಕಾರ್ಯಕ್ಕೂ ಅದರದೇ ಆದ ಘನತೆ-ಗೌರವ ಇರುತ್ತದೆ. ನಾವು ಮಾಡುವ ಕೆಲಸವನ್ನು ನಾವು ಗೌರವಿಸಬೇಕು. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಒಳ್ಳೆಯ ಅಭ್ಯಾಸ ಕೊಡಿಸಬೇಕು. ವಿಶೇಷವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.

ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಮನೋವೈದ್ಯ ಡಾ.ಬಸವರಾಜ ಮಸಳಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್‌ ಮೆಕ್ಕಳಕಿ, ಉಪ ಆಯುಕ್ತಸಿದ್ದಪ್ಪ ಮಹಾಜನ, ವಲಯ ಆಯುಕ್ತರಾದ ರಮೇಶ ಜಾಧವ, ಸಜ್ಜನ ಪಾಟೀಲ, ಪೌರ ಕಾರ್ಮಿಕರ ಸಂಘಟಿಕರಾದ ಲಕ್ಷ್ಮಣ ಹಂದ್ರಾಳ, ಪೌರ ಕಾರ್ಮಿಕರಾದ
ಸುನಂದಾ‌ ಚಲವಾದಿ, ರಾಯಪ್ಪ ಮುಂಡಗೋಡ, ಮುಖಂಡರಾದ ಪ್ರೇಮಾನಂದ ಬಿರಾದಾರ, ಅಶೋಕ ಸಜ್ಜನ ಉಪಸ್ಥಿತರಿದ್ದರು.

ಪೌರ ಕಾರ್ಮಿಕ ದಿನಾಚರಣೆಯ ನಿಮಿತ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಬಹುಮಾನ ನೀಡಿ,ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.