ADVERTISEMENT

ಹುಲಿ ಪ್ರತ್ಯಕ್ಷ ವದಂತಿ: ಬೆಚ್ಚಿಬಿದ್ದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 16:37 IST
Last Updated 22 ನವೆಂಬರ್ 2020, 16:37 IST
ಚಡಚಣ ಸಮೀಪದ ದೇವರ ನಿಂಬರಗಿ ಗ್ರಾಮದಿಂದ ಧುಮಕನಾಳ ರಸ್ತೆಯ ಸಮೀಪ ಹುಲಿ ಕಾಣಿಸಿಕೊಂಡ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದರು
ಚಡಚಣ ಸಮೀಪದ ದೇವರ ನಿಂಬರಗಿ ಗ್ರಾಮದಿಂದ ಧುಮಕನಾಳ ರಸ್ತೆಯ ಸಮೀಪ ಹುಲಿ ಕಾಣಿಸಿಕೊಂಡ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದರು   

ಚಡಚಣ: ತಾಲ್ಲೂಕಿನ ದೇವರನಿಂಬರಗಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಹುಲಿ ಅಲೆದಾಡುತ್ತಿದ್ದು, ಹೆಜ್ಜೆಗುರುತು ಕಾಣಿಸಿಕೊಂಡಿದೆ ಎಂಬ ವದಂತಿ ಶನಿವಾರ ರಾತ್ರಿ ಭಾಗದ ಜನರನ್ನು ಬೆಚ್ಚಿ ಬೀಳಿಸಿತು.

ಚಡಚಣ ಪೋಲಿಸರು ಮತ್ತು ಅರಣ್ಯ ಅಧಿಕಾರಿಗಳು ಹುಲಿ ಪತ್ತೆಗಾಗಿ ರಾತ್ರಿ ಇಡೀ ಹೊಲಗದ್ದೆಗಳಲ್ಲಿ ಅಲೆದಾಡಿದ್ದಾರೆ. ಆದರೆ ಹುಲಿ ಓಡಾಡಿರುವ ಯಾವುದೇ ಕುರುಹು ಸಿಗಲಿಲ್ಲ.

ಭಾನುವಾರವೂ ಸ್ಥಳದಲ್ಲಿ ಬೀಡು ಬಿಟ್ಟು ವದಂತಿಗೆ ಕಿವಿ ಗೊಡದಂತೆ ಸಾರ್ವಜನಿಕರಿಗೆ ಧೈರ್ಯ ತುಂಬಿದರು.

ADVERTISEMENT

ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆ ಭಾಗದಲ್ಲಿ ಬೀಡು ಬಿಟ್ಟಿದ್ದು ಹುಲಿ ಸಂಚರಿಸಿದ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲಎಂದು ಸಿಪಿಐ ಚಿದಂಬರ ಮಡಿವಾಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.