ADVERTISEMENT

ತಿಕೋಟಾ: ಲಘು ಭೂಕಂಪನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 16:03 IST
Last Updated 3 ಫೆಬ್ರುವರಿ 2023, 16:03 IST

ತಿಕೋಟಾ: ತಾಲ್ಲೂಕಿನ ಘೋಣಸಗಿ, ಕಳ್ಳಕವಟಗಿ, ಹುಬನೂರ, ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಸಿದ್ದಾಪುರ ಕೆ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಮಹಾರಾಷ್ಟ್ರದ ಬಿವರಗಿ, ಮೊರಬಗಿ ಗ್ರಾಮದ ಸುತ್ತಮುತ್ತ ಗುರುವಾರ ರಾತ್ರಿ 10.5 ಮತ್ತು ಮಧ್ಯರಾತ್ರಿ 1.47ಕ್ಕೆ ಎರಡು ಬಾರಿ ಲಘು ಭೂಕಂಪನವಾಗಿದೆ.

ನಿದ್ರೆ ಮಂಪರಿನಲ್ಲಿದ್ದ ಜನರಿಗೆ ಭೂಕಂಪನದ ಅನುಭವ ಅಷ್ಟಾಗಿ ಆಗಿಲ್ಲ. ಆದರೆ, ಕೆಲವರು ಕಂಪನದ ಅನುಭವದಿಂದ ಮನೆಯಿಂದ ಹೊರಗೆ ಓಡಿ ಬಂದರು.

ರಿಕ್ಟರ್ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬಿವರಗಿ ಗ್ರಾಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.