
ಪ್ರಜಾವಾಣಿ ವಾರ್ತೆ
ವಿಜಯಪುರ: ಕೊಲ್ಹಾರ ತಾಲ್ಲೂಕಿನ ಚಿಕ್ಕಆಸಂಗಿ ಗ್ರಾಮದಲ್ಲಿ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಚಿಕ್ಕಆಸಂಗಿ ಗ್ರಾಮದ ಆಕಾಶ ಮಹಾದೇವ ಬೆನ್ನೂರ (4) ಹಾಗೂ ಬೋರಮ್ಮ ಸಂಗಣ್ಣ ಬೆನ್ನೂರು (4) ಸಾವನ್ನಪ್ಪಿರುವ ಕಂದಮ್ಮಗಳು.
ಮನೆಯ ಪಕ್ಕದ ಚಿಕ್ಕಪ್ಪನ ಜಮೀನಿನಲ್ಲಿ ಆಟವಾಡುತ್ತಾ ಹೋಗಿ ಅಲ್ಲಿರುವ ಕೃಷಿ ಹೊಂಡದಲ್ಲಿ ಬಿದ್ದು ಸಾವಿಗೀಡಾಗಿದ್ದಾರೆ.
ಕೊಲ್ಹಾರ ಪಿಎಸ್ಐ ಸಿದ್ದಪ್ಪ ಯಡಹಳ್ಳಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ದೂರು ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.