ADVERTISEMENT

‘ಸಂಸ್ಕೃತಿಯ ಮಹತ್ವ ಅರಿಯಿರಿ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 14:25 IST
Last Updated 12 ಡಿಸೆಂಬರ್ 2018, 14:25 IST
ಬಸವನಬಾಗೇವಾಡಿ ತಾಲ್ಲೂಕಿನ ಜಾಯವಾಡಗಿಯಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ ರಥಕ್ಕೆ ಪೂಜೆ ಸಲ್ಲಿಸಲಾಯಿತು
ಬಸವನಬಾಗೇವಾಡಿ ತಾಲ್ಲೂಕಿನ ಜಾಯವಾಡಗಿಯಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ ರಥಕ್ಕೆ ಪೂಜೆ ಸಲ್ಲಿಸಲಾಯಿತು   

ಜಾಯವಾಡಗಿ(ಬಸವನಬಾಗೇವಾಡಿ): ವಿಜಯಪುರ ಸಮೀಪದ ಕಗ್ಗೋಡದಲ್ಲಿ ಹಮ್ಮಿಕೊಂಡಿರುವ ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ಸಂಚರಿಸುತ್ತಿರುವ ರಥಯಾತ್ರೆಗೆ ಬುಧವಾರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪೂಜೆ ಸಲ್ಲಿಸಿ, ಸ್ವಾಗತ ಕೋರಲಾಯಿತು.‌

ನಂತರ ಸೋಮನಾಥೇಶ್ವರ, ಶಿವಪ್ಪಮುತ್ಯಾರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ಸಂಸ್ಕೃತಿ ಉತ್ಸವದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎ.ದೇಗಿನಾಳ, ‘ಸಂಸ್ಕೃತಿ ಉತ್ಸವದ ಜಾಗೃತಿ ಮೂಡಿಸುವುದಕ್ಕಾಗಿ ರಥಯಾತ್ರೆಯು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸುತ್ತಿದೆ. ವಿವಿಧೆಡೆ ಸಭೆಗಳನ್ನು ಆಯೋಜಿಸುವ ಮೂಲಕ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಎಸ್.ಎಸ್.ಬಳಿಗಾರ ಮಾತನಾಡಿ, ‘8 ದಿನಗಳವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಸಂಸ್ಕೃತಿ, ಸಂಪ್ರದಾಯದ ಮಹತ್ವ ಅರಿಯಬೇಕು’ ಎಂದು ಹೇಳಿದರು.

ADVERTISEMENT

ಬಾಪು ಈಳಗೇರ, ದೇವೇಂದ್ರ ಗೋನಾಳ ಮಾತನಾಡಿದರು. ಬಸನಗೌಡ ಪಾಟೀಲ, ಎಸ್.ಎಸ್.ಬಳಿಗಾರ, ಐ.ಬಿ.ಕಲ್ಲೂರ, ಶಂಕರ ಬೂದನೂರ, ಎಸ್.ಬಿ.ಕಲ್ಲೂರ, ಪ್ರಭು ಬಡಿಗೇರ, ಶಿವನಗೌಡ ಬಿರಾದಾರ, ಹಣಮಂತ ಕುಂಬಾರ, ಸೋಮಣ್ಣ ಚಿಂಚೋಳಿ, ಸಿದ್ದು ಕಾಶಿನಕುಂಟಿ, ಬಾಪು ದಿಂಡವಾರ, ಮಲ್ಲಯ್ಯ ಹಿರೇಮಠ, ಪ್ರಾಚಾರ್ಯ ಎಸ್.ಬಿ.ಮೇಗೇರಿ, ಎ.ಬಿ.ಬಿರಾದಾರ, ಶಿಕ್ಷಕಿ ಎಂ.ಎಸ್.ಚೌಧರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.