ADVERTISEMENT

ವಿಜಯಪುರದಲ್ಲಿ ವರಮಹಾಲಕ್ಷ್ಮಿ ಪೂಜಾ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 14:48 IST
Last Updated 31 ಜುಲೈ 2020, 14:48 IST
ವಿಜಯಪುರ ನಗರದಲ್ಲಿ ಶುಕ್ರವಾರ ಮಹಿಳೆಯರು ವರಮಹಾಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿದರು
ವಿಜಯಪುರ ನಗರದಲ್ಲಿ ಶುಕ್ರವಾರ ಮಹಿಳೆಯರು ವರಮಹಾಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿದರು   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಮಹಿಳೆಯರುವರಮಹಾಲಕ್ಷ್ಮಿಗೆ ಭಕ್ತಿಭಾವದಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಲಾಯಿತು.

ಮಹಿಳೆಯರು ತಮ್ಮ ತಮ್ಮ ಮನೆಯ ಬಾಗಿಲಿಗೆ ಮಾವಿನ ತೋರಣ, ಹೂಗಳಿಂದ ಸಿಂಗರಿಸಿ, ಕಳಸಕ್ಕೆ ಲಕ್ಷ್ಮಿಯ ಮೊಗವಾಡ ಹಾಕಿ, ಸೀರೆಯುಡಿಸಿ, ಆಭರಣಗಳನ್ನು ಹಾಕಿ, ಅದರ ಮುಂದೆ ನೋಟು, ನಾಣ್ಯಗಳನ್ನಿರಿಸಿ ಪೂಜಿಸಿದರು.ಕಳಸದ ಮುಂದೆ ವಿವಿಧ ಬಗೆಯ ಹಣ್ಣುಗಳು, ಸಿಹಿತಿಂಡಿಗಳನ್ನು ನೈವೇದ್ಯ ಅರ್ಪಿಸುವ ಮೂಲಕ ಹಬ್ಬವನ್ನು ಆಚರಿಸಿದರು.

ನೆರೆಹೊರೆಯವರನ್ನು ತಮ್ಮ ಮನೆಗಳಿಗೆಅರಿಸಿನ, ಕುಂಕುಮಕ್ಕೆ ಆಹ್ವಾನಿಸಿ, ಬಾಗಿನ ನೀಡಿದರು. ಸಿಹಿ ಊಟ ಬಡಿಸಿ, ಸಂಭ್ರಮಿಸಿದರು. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಬ್ಬದ ಸಂಭ್ರಮ ಕಡಿಮೆ ಇತ್ತು.

ADVERTISEMENT

ನಗರದ ಎಂ.ಜಿ.ರಸ್ತೆಯಲ್ಲಿರುವ ಲಕ್ಷ್ಮಿಗುಡಿ ಸೇರಿದಂತೆ ವಿವಿಧದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಆದರೆ, ಕೋವಿಡ್‌ನಿಂದಾಗಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆಯಲ್ಲಿ ಹೂವು, ಹಣ್ಣು ದರ ದುಪ್ಪಟ್ಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.